ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ಅಪರಿಚಿತರು ಪರಿಚಿತರಾದಾಗ, ಪರಿಚಯವು ಸ್ನೇಹವಾದಾಗ...

Mainashree
Updated On : 15 Jul 2013, 11:00 am

ಖುಷಿ ಕೆ. ಗೌಡ, ಹಾಸನ, 8277551189
ಅಪರಿಚಿತರು ಪರಿಚಿತರಾದಾಗ, ಪರಿಚಯವು ಸ್ನೇಹವಾದಾಗ, ಸ್ನೇಹವು ಪ್ರೀತಿಯಾದಾಗ, ಪ್ರೀತ್ಸೋದು ತಪ್ಪಾ?
ಎಲ್ಲಾ ಆಗಿಹೋದ ಮೇಲೆ ತಪ್ಪಾ, ಒಪ್ಪಾ ಅಂತ ಕೇಳಿಯೇನು ಪ್ರಯೋಜನ ?

ಎಂ.ಬಿ. ಕೃಷ್ಣಮೂರ್ತಿ, ಚಾಮರಾಜನಗರ, 9449130531
ಹಿಂದಿನ ಕಾಲದಲ್ಲಿ ಗುಣನೋಡಿ ಹೆಣ್ಣು ಕೊಡಿ ಅಂತಿದ್ರು. ಈಗಿನ ಕಾಲದಲ್ಲಿ?
ಅಯ್ಯೋ ಏನೂ ನೋಡಲ್ಲ ಹೆಣ್ಣು ಸಿಕ್ರೆ ಸಾಕು ಅಂತಿದಾರೆ ಹುಡುಗ್ರು!

ವಿ. ಹೇಮಂತಕುಮಾರ, ಬೆಂಗಳೂರು, 9035992900
ಹುಡುಗಿಯರೇಕೆ ಇಲಿ, ಜಿರಳೆಗಳಿಗೆ ಹೆದರುತ್ತಾರೆ?
ಅವುಗಳಿಗೆ ಮೀಸೆ ಇರುವುದರಿಂದ!

ಓಂಚನ್ನೇಶ್ ಅರಬಿಳಚಿಕ್ಯಾಂಪ್, ಭದ್ರಾವತಿ, 9900739725
ಪೆಗ್ಬಾಸ್ಗೂ- ಬಿಗ್ಬಾಸ್ಗೂ ಏನು ವ್ಯತ್ಯಾಸ?
ಬಿಗ್ಬಾಸ್ ಮನೆಯಲ್ಲಿರುವವರನ್ನೆಲ್ಲ ನಿಯಂತ್ರಿಸುತ್ತಾನೆ. ಪೆಗ್ಬಾಸ್ ತನ್ನನ್ನೇ ನಿಯಂತ್ರಿಸಲು ಕಷ್ಟಪಡುತ್ತಿರುತ್ತಾನೆ.

ರಾಂಕುಮಾರ್ ಜೆ.ಎಲ್., ಬೆಂಗಳೂರು
ವೈಶ್ಯಾವಾಟಿಕೆಗೆ ಇನ್ನೊಂದು ಹೆಸರು?
ಕೆಲವರು ಅದನ್ನು ರಾಜಕೀಯ ಅಂತಾನು ಕರೆಯುತ್ತಾರೆ !

 ಬಾಣಭಟ್ಟ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement