ಗೆಳೆಯ ಅಪರೂಪಕ್ಕೆ ಸಿಕ್ಕಿರುವೆ ಮಾತೂ ಇರಲಿ ಮುತ್ತಿನ...
ವಿ. ಹೇಮಂತಕುಮಾರ, 9035992900
ಗೆಳೆಯ ಅಪರೂಪಕ್ಕೆ ಸಿಕ್ಕಿರುವೆ ಮಾತೂ ಇರಲಿ ಮುತ್ತಿನ ನಡು ನಡುವೆ ಅಂತಿದಾಳಲ್ಲ?
ಮಾತು ಮುತ್ತಿನಂತಿರಬೇಕು. ಮುತ್ತೇ ಮಾತಾಗಾಬಾರದು ಅಂತ!
ಓಂಚನ್ನೇಶ್ ಅರಬಿಳಚಿಕ್ಯಾಂಪ್, ಭದ್ರಾವತಿ, 9900739725
ಡಾಕ್ಟರ್ ಮುಟ್ಟಿದರೂ ವಾಸಿಯಾಗದ ಕಾಯಿಲೆ, ನರ್ಸ್ ಮುಟ್ಟಿದ ಕೂಡಲೇ ಮಾಯವಾಯ್ತಲ್ಲ?
ಲೈಂಗಿಕ ಕಾಯಿಲೆಯೇ ಇರಬೇಕು!
ಪೇಂಟರ್ ಪಾಪು, 9008877712
ದೇವರುಗಳಿಗೂ ಒಬ್ಬರನ್ನು ಕಂಡರೆ ಒಬ್ಬರಿಗೆ ಆಗೊಲ್ವಂತೆ ಯಾಕೆ?
ಮನುಷ್ಯರ ಸಹವಾಸದಿಂದ ಉಂಟಾದ ಸಮಸ್ಯೆಯಿದು.
ರವಿಕುಮಾರ ಜಿ.ಬಿ. 9449669897
ಡಿ.ಕೆ. ಶಿವಕುಮಾರ್ ಮೇಲೆ ಎಚ್.ಡಿ. ಕುಮಾರಸ್ವಾಮಿಗೆ ಪ್ರೀತಿ ಶುರುವಾಗಿದೆ ಏಕೆ?
ಯಾಕೆಂದರೆ ಅವರು ಡಿ.ಕೆ., ಇವರು ಹೆಚ್.ಡಿ.ಕೆ.!
ಕೆ.ಎಂ. ಲಿಂಗರಾಜು, ನಂಜನಗೂಡು, 9916021365
ಮೊಬೈಲ್ ಬಳಕೆಯಿಂದ ಮೌನಭಾಷೆ ಮಾಯವಾಗುತ್ತಿದೆಯಲ್ಲಾ?
ಸೈಲೆಂಟ್ ಮೋಡ್ ಕೊಟ್ಟಿರೋದು ಅದ್ಕೇ ಅಲ್ವಾ?
ಬಾಣಭಟ್ಟ