ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ಮದುವೆ ಕಾಯಿದೆ ಮಾರ್ಪಾಟು

Mainashree
Updated On : 18 Jul 2013, 10:23 am

ಈಗಿನ ಮದುವೆಗಳನ್ನು ಹಾಗೂ ವೈವಾಹಿಕ ಜೀವನವನ್ನು ನಿಯಂತ್ರಿಸುವ ಕಾಯಿದೆ, ಮಹಿಳೆಯರ ವಿರೋಧಿ ನಿಯಮಗಳನ್ನು ಒಳಗೊಂಡಿದೆ ಎನ್ನುವುದು ಪ್ರಗತಿಗಾಮಿ ಮಹಿಳಾ ಸಂಘಟನೆಗಳ ಬಹುಕಾಲದ ನಿಲವು.
ಮೂಲಭೂತವಾಗಿ ವಿವಾಹ ವಿಚ್ಛೇದನ ಪಡೆದರೂ "ಪರಿತ್ಯಕ್ತೆಯ" ಅವಸ್ಥೆಯಲ್ಲೇ ಇರಬೇಕಾಗಿ ಬಂದಿರುವ ಏಕಾಂಗಿನಿ ಮಹಿಳೆಯರಿಗೆ ಬದುಕುವುದಕ್ಕೆ ಸೂಕ್ತ ವ್ಯವಸ್ಥೆಯನ್ನು ಕಲ್ಪಿಸುವ ದಿಕ್ಕಿನಲ್ಲಿ ಈಗಿನ ಕಾಯಿದೆಯಿಂದ ಹೆಚ್ಚು ಅನುಕೂಲವಾಗಿಲ್ಲ.
ಈ ಕಾಯಿದೆಯಲ್ಲಿ ಹಲವು ಮಾರ್ಪಾಟುಗಳನ್ನು ಮಾಡಲು ಕೇಂದ್ರ ಸಚಿವ ಸಂಪುಟ ಬುಧವಾರ ನಿರ್ಧರಿಸಿದೆ. ಮಂತ್ರಿ ಮಂಡಲದ ಅಂಗೀಕಾರ ಪಡೆದ ನಿಯಮಗಳಲ್ಲಿ, ಪುರುಷನ ಪಿತ್ರಾರ್ಜಿತ ಆಸ್ತಿಯ ಮೇಲೂ ವಿಚ್ಛೇದಿತ ಪತ್ನಿಗೆ ಹಕ್ಕಿದೆ. ಆಕೆಗೂ ಒಂದು ಪಾಲು ಸಿಗಬೇಕು ಎನ್ನುವ ನಿಯಮ ವಿಚ್ಛೇದಿತ ಮಹಿಳೆಯರ ದೃಷ್ಟಿಯಿಂದ ತೀರ ಅಗತ್ಯವಾಗಿದ್ದ ನಿಯಮ. ಅದನ್ನು ಸಾಮಾಜಿಕ ಸ್ವಾಸ್ಥ್ಯವನ್ನು ಬಯಸುವ ಪ್ರಗತಿಪರರೆಲ್ಲರೂ ಒಪ್ಪಲೇಬೇಕು.
ಈ ವಿಚಾರದಲ್ಲಿ ಸಂಸದೀಯ ಸಮಿತಿಯೊಂದರ ಶಿಫಾರ್ಸು ಪ್ರಕಟವಾಗಿ ವರ್ಷಗಳೇ ಉರುಳಿದ ಅನಂತರ ಅದನ್ನು ಸಚಿವ ಸಂಪುಟ ಗುರ್ತಿಸಿರುವುದಕ್ಕೇನು ತುರ್ತು ಕಾರಣ? ಇನ್ನೇನು ಕಾರಣವಿದ್ದೀತು. ಚುನಾವಣೆ ಸಮೀಪಿಸುತ್ತಿರುವಂತೆಯೇ ಇಂತಹ ಲಿಂಗ ನ್ಯಾಯ, ಸಾಮಾಜಿಕ ನ್ಯಾಯದತ್ತ ಗಮನ ಹರಿಯುವುದು ಸಹಜ ಅಲ್ಲವೇ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement