ಸಿನಿಮಾಗಳಲ್ಲಿ ವಿಲನ್‌ಗಳಿಗೇಕೆ ಹೆಂಡತಿ ಇರೋದಿಲ್ಲ?
ಎಂ.ಬಿ. ಕೃಷ್ಣಮೂರ್ತಿ, ಚಾಮರಾಜನಗರ, 9449130531
ನಾನು, ನಾನು, ನಿಮ್ಮನ್ನು, ನಿಮ್ಮನ್ನು, ತುಂಬಾ, ತುಂಬಾ ಎಂದು ಮೊಬೈಲ್‌ನಿಂದ ಕಾಲ್ ಮಾಡಿ, ಕಡಿತಗೊಳಿಸುವ ಹುಡುಗಿಯ ಇಂಗಿತ?
ನಾನು, ನಾನು, ನಿಮ್ಮನ್ನು, ನಿಮ್ಮನ್ನು, ತುಂಬಾ, ತುಂಬಾ, ಕಾಡಿಸಬೇಕು ಎಂದಿದ್ದೇನೆ ಎಂದಿರಬೇಕು!
ಹರಳಹಳ್ಳಿ ಪುಟ್ಟರಾಜು, ಪಾಂಡವಪುರ, 9632838088
ಸಿನಿಮಾಗಳಲ್ಲಿ ವಿಲನ್‌ಗಳಿಗೇಕೆ ಹೆಂಡತಿ ಇರೋದಿಲ್ಲ?
ಹೆಂಡತಿ ಇದ್ದಿದ್ದರೆ ಹೀರೋಯಿನ್ ಮೇಲೆ ಕಣ್ಣು ಹಾಕಿದ ಎಂಬ ಕಾರಣಕ್ಕೆ ಹೀರೋ ಕೊಲ್ಲುವ ಮೊದಲೇ ಆಕೆಯೇ ಕೊಂದುಬಿಡುತ್ತಿದ್ದಳು.
ದೇಶವಳ್ಳಿ ಶಿವು, ಚಾಮರಾಜನಗರ, 9980048699
ಅಡುಗೆ ಭಟ್ಟರಿಗೂ, ನಮ್ಮ ಬಾಣಭಟ್ಟರಿಗೂ ಏನಾದರೂ ಸಾಮ್ಯ ಇದೆಯಾ?
ಅವರು ಉಣಬಡಿಸಿ ಹೊಟ್ಟೆ ತುಂಬಿಸುತ್ತಾರೆ. ನಾನು ನಗಿಸಿ ಹೊಟ್ಟೆ ತುಂಬಿಸುತ್ತೇನೆ.
ಚಿರಪ್ರಭ ನಂಜನಗೂಡು, 8553783107
ಬಿಹಾರದಲ್ಲಿ ಬಾಂಬ್ ಸ್ಫೋಟವಾದರೆ ಗುಜರಾತಿನತ್ತ 'ಕೈ' ತೋರುವುದು ನ್ಯಾಯವೇ?
ಬೇರೆಯವರತ್ತ 'ಕೈ' ತೋರಿ ಬಚಾವಾಗುವುದೇ ಅವರ ಹೆಗ್ಗುಣ!
ಕೆನ್ನಾಳು ಭಾಸ್ಕರ, 9036416729
ಹೆಣ್ಣಿಗೆ ಶೀಲವೇ ಭೂಷಣ. ಗಂಡಿಗೆ?
ಅಶ್ಲೀಲ!
ಬಾಣಭಟ್ಟ