ಅಪ್ಪ ಕೊಡಿಸೋ ಸೀರೆ ಗಂಡ ಬರುವರೆಗೆ...
ಅಪ್ಪ ಕೊಡಿಸೋ ಸೀರೆ ಗಂಡ ಬರುವರೆಗೆ, ಗಂಡ ಕೊಡಿಸೋ ಸೀರೆ ಮಸಣದವರೆಗೆ. ರಾಜಕೀಯದವರು ಕೊಡೋ ಸೀರೆ? ಚುನಾವಣೆ ಬರೋವರೆಗೆ
ತಲವಾಟ ಮಂಜು ಸಾಗರ, 9480931611
ಮಗುವಿನ ಮುಗ್ಧತೆ ತಾರುಣ್ಯದಲ್ಲಿ ಮಾಯವಾಗುವುದೇ?
ಮಾಯವಾಗದಿದ್ದರೆ ನಿತ್ಯಾನಂದನ ಥರ 6 ವರ್ಷದ ಮನಸ್ಸು 30 ವರ್ಷದ ದೇಹ ಆಗಿಬಿಡ್ತಾರೆ ಹುಶಾರು!
ಹರಳಹಳ್ಳಿ ಪುಟ್ಟರಾಜು, ಪಾಂಡವಪುರ, 9632838088
ಕೆಲ ಹುಡುಗಿಯರು ಬಳೆಯಷ್ಟು ಗಾತ್ರದ ರಿಂಗನ್ನು ಕಿವಿಗೆ ಹಾಕಿಕೊಳ್ತಾರಲ್ಲ ಯಾಕೆ?
ಅದು 2 ಇನ್ 1. ಕಿವಿಗೆ ಹಾಕಿಕೊಂಡ್ರೆ ಓಲೆ, ಕೈಗೆ ಹಾಕಿಕೊಂಡ್ರೆ ಬಳೆ.
ಮಂಜುನಾಥ ಚಿನಕುರುಳಿ, 9164883467
ಬಲೆಯಲ್ಲಿರುವ ಮೀನಿಗೂ, ಪ್ರೀತಿಯಲ್ಲಿರುವ ಪ್ರೇಮಿಗೂ ವ್ಯತ್ಯಾಸವೇನು?
ಮೀನು ತಟ್ಟನೆ ಸಾಯುತ್ತದೆ. ಪ್ರೇಮಿ ನಿಧಾನವಾಗಿ!
ವಿ. ಹೇಮಂತಕುಮಾರ, ಬೆಂಗಳೂರು, 9035992900
ನಮ್ಮಲ್ಲಿ ಹೆಣ್ಣಿಗೆ ಇರುವ ಪೂಜನೀಯ, ಗೌರವ ಭಾವನೆಯ ಸ್ಥಾನ ಗಂಡಿಗೇಕಿಲ್ಲ?
ಇಬ್ಬರಿಗೂ ಪೂಜನೀಯ ಸ್ಥಾನ ಸಿಕ್ಕಿಬಿಟ್ಟರೆ ಪೂಜೆ ಮಾಡುವವರು ಯಾರು?
ಶ್ರೀಧರ್ ಡಿ. ರಾಮಚಂದ್ರಪ್ಪ, ಚಿತ್ರದುರ್ಗ, 9880791106
-ಬಾಣಭಟ್ಟ