ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ಅಕ್ರಮ ಗಣಿಗಾರಿಕೆಯ ಕತೆ

Vishwanath S
Updated On : 24 Jul 2013, 10:36 am

ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಕಂಡು ಬಂದಿರುವ ಅಕ್ರಮ ಗಣಿಗಾರಿಕೆ ನಿಜವಾಗಲೂ ಒಂದು ದೊಡ್ಡ ಪೀಡೆ. ಈ ಅವ್ಯವಹಾರದಿಂದ ಪರಿಸರಕ್ಕೆ ಆಗಿರುವ ಹಾನಿಗೆ ಮೌಲ್ಯವನ್ನು ಕಟ್ಟುವುದು ಸಾಧ್ಯವೇ ಇಲ್ಲ. ಕೆಲವು ಪ್ರದೇಶಗಳಂತೂ ಮನುಷ್ಯರು ಬದುಕಿರುವುದೇ ಅಸಾಧ್ಯವೆನ್ನುವ ಪರಿಸ್ಥಿತಿಯನ್ನು ಮುಟ್ಟಿದೆ.
ಈ ಅಕ್ರಮ ಗಣಿಗಾರಿಕೆಯ ಎಲ್ಲ ಆಯಾಮಗಳನ್ನು ಸಮಗ್ರವಾಗಿ ಪರಿಶೀಲಿಸಿ, ಸಮಗ್ರ ಸ್ವರೂಪದ ವರದಿಯನ್ನು ಮಾಜಿ ಲೋಕಾಯುಕ್ತ ಸಂತೋಷ ಹೆಗಡೆ ಅವರು ಸರ್ಕಾರಕ್ಕೆ ಸಲ್ಲಿಸಿ ಎರಡು ವರ್ಷಗಳೇ ಉರುಳಿದರೂ ಹೇಳಿಕೊಳ್ಳುವಂತಹ ಕ್ರಮವನ್ನು ಸರ್ಕಾರ ಜರುಗಿಸಿಲ್ಲ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಅಕ್ರಮ ಗಣಿಗಾರಿಕೆಯಿಂದ ಸುಮಾರು 16,000 ಕೋಟಿ ರುಪಾಯಿಗಳಷ್ಟು ನಷ್ಟವಾಗಿದೆ ಎಂದಿದ್ದಾರೆ. ಲೋಕಾಯುಕ್ತರ ವರದಿಯಲ್ಲಿ ಹೆಸರು ಕಾಣಿಸಿರುವ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಕ್ರಮ ಕೈಗೊಳ್ಳಲು ಅನುಮತಿ ನೀಡಿದ್ದಾರೆ. ಪಟ್ಟಿಯಲ್ಲಿ ಹಲವಾರು ಐ.ಎ.ಎಸ್. ಅಧಿಕಾರಿಗಳೂ ಇದ್ದಾರೆ.  ಇವರೆಲ್ಲರ ವಿಚಾರಣೆ ಮುಗಿದು ಅವರ ಅಪರಾಧ ನ್ಯಾಯಾಲಯದಲ್ಲಿ ಸಾಬೀತಾಗಲು, ಈಗಿನ ವ್ಯವಸ್ಥೆಯಲ್ಲಿ ವಿಪರೀತ ಕಾಲ ಬೇಕು. ಇದನ್ನು ಸರ್ಕಾರ ಮಾಮೂಲಿ ಕೆಲಸವೆನ್ನುವಂತೆ ಪರಿಗಣಿಸಬಾರದು. ಅಕ್ರಮ ಗಣಿಗಾರಿಕೆಯ ತಡೆ ಹಾಗೂ ಆ ಪಾತಕದಲ್ಲಿ ತೊಡಗಿದ್ದವರನ್ನು ಶಿಕ್ಷಿಸುವುದನ್ನು ಒಂದು ಮಹಾ ಸಮರವೆಂದೇ ಸರ್ಕಾರ ಭಾವಿಸಬೇಕು.
 ವಿಶೇಷ ನ್ಯಾಯಾಲಯಗಳ ರಚನೆ, ಅಲ್ಲಿ ಕೆಲಸ ಮಾಡಲು ಸಮರ್ಥರಾದ ಪ್ರಾಸಿಕ್ಯೂಟರ್‌ಗಳನ್ನು ನೇಮಿಸಿ, ಆದಷ್ಟು ಬೇಗ ಕೆಲವರಿಗಾದರೂ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕು. ಇದನ್ನು ತುರ್ತು ಕೆಲಸ ಎಂದೇ ಭಾವಿಸಬೇಕು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement