ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ತುಟಿಯಂಚಿನಲ್ಲಿ ನಕ್ಕು ಕಣ್‌ನೋಟದಲ್ಲೇ ಕೊಲ್ಲುತ್ತಿದ್ದಾಳೆ ಏನು ಮಾಡಲಿ?

Vishwanath S
Updated On : 24 Jul 2013, 10:40 am

ತುಟಿಯಂಚಿನಲ್ಲಿ ನಕ್ಕು ಕಣ್‌ನೋಟದಲ್ಲೇ ಕೊಲ್ಲುತ್ತಿದ್ದಾಳೆ ಏನು ಮಾಡಲಿ?
ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ದೂರು ದಾಖಲಿಸು.
ಬರ್ಕಲಿರಮೇಶ್, ಕಿರಗಂದೂರು, ಮಂಡ್ಯ, 9008741348

ಹೆಂಡತಿ ಕೊಡೋ ಮಿಸ್ ಕಾಲ್‌ಗೂ ಪ್ರೇಯಸಿ ಕೊಡೋ ಮಿಸ್‌ಕಾಲ್‌ಗೂ ಏನು ವ್ಯತ್ಯಾಸ?
ಎದೆ ಜುಂ ಎನ್ನುವುದಕ್ಕೂ ಝಲ್ ಎನ್ನುವುದಕ್ಕೂ ಇರುವಷ್ಟೇ!
ಪ್ರಮೋದ್‌ಕುಮಾರ್ ನೋಬೋನಗರ್, ಬೆಂಗಳೂರು

ಪ್ರತ್ಯಕ್ಷಗೊಂಡ ದೇವರೆಲ್ಲ ಯಾವ 'ವರ' ಬೇಕು ಅಂತ ಕೇಳ್ತಾರೆ ಹೊರತು, ಯಾವ 'ವಧು' ಬೇಕು ಅಂತ ಕೇಳುವುದಿಲ್ಲ ಏಕೆ?
ಸದ್ಯ 'ವಧು'ಗಳ ಕೊರತೆ ಇರುವುದರಿಂದ
ವಿ. ಹೇಮಂತಕುಮಾರ, ಬೆಂಗಳೂರು, 9035992900

ಬಕ್ಕ ತಲೆಯವರು ಸದಾ ತಮ್ಮ ತಲೆಯ ಮೇಲೆ ಕೈಯಾಡಿಸುತ್ತಲೇ ಇರುತ್ತಾರಲ್ಲ ಯಾಕೆ?
ಅಕಸ್ಮಾತ್ ಕೂದಲು ಬೆಳೆದಿಬಿಟ್ಟಿರಬಹುದು ಎಂಬ ಆಸೆ!
ಓಂ ಚನ್ನೇಶ್ ಅರಬಿಳಚಿ ಕ್ಯಾಂಪ್, ಭದ್ರಾವತಿ, 9901257131

ಪ್ರೀತಿ ಮಾಡಲು ಲೈಸೆನ್ಸ್ ಮಾಡುವಂತಿದ್ದರೆ?
ಹದಿನೆಂಟಕ್ಕಿಂತ ಕಡಿಮೆ ವಯಸ್ಸಿನವರಿಗೆ, ಲೈಸೆನ್ಸ್ ಕೊಡದೇ ಇರಬಹುದಾಗಿತ್ತು!
ಜೆ.ಪಿ. ನಾಗರಾಜ ದಾವಣಗೆರೆ

 -ಬಾಣಭಟ್ಟ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement