ವೇದಿಕೆಯಲ್ಲಿ ದೇವೇಗೌಡರು ಮಾಡುವ ನಿದ್ರೆಗೂ...
ವೇದಿಕೆಯಲ್ಲಿ ದೇವೇಗೌಡರು ಮಾಡುವ ನಿದ್ರೆಗೂ ಸಿದ್ದರಾಮಯ್ಯನವರು ಮಾಡುವ ನಿದ್ರೆಗೂ ವ್ಯತ್ಯಾಸವೇನು?
ಒಬ್ಬರದ್ದು ರಾಷ್ಟ್ರಮಟ್ಟದ್ದು. ಇನ್ನೊಬ್ಬರದ್ದು ರಾಜ್ಯಮಟ್ಟದ್ದು.
ವಿ. ಹೇಮಂತಕುಮಾರ, ಬೆಂಗಳೂರು, 9035992900
ಫ್ಯಾಷನ್ ಡಿಸೈನರ್ ಮಧು, 9945737427
ಕೆಮಿಸ್ಟ್ರಿ- ಬಯಾಲಜಿ ಕಷ್ಟ ಎನ್ನುವ ವಿದ್ಯಾರ್ಥಿಗಳು 'ಪ್ರೇಮಾಲಜಿ'ಯನ್ನು ಸುಲಭವಾಗಿ ಕಲಿಯುತ್ತಾರಲ್ಲ?
ಅದು ಬಯಾಲಜಿಯ ಪ್ರಾಕ್ಟಿಕಲ್!
ಖುಷಿ ಕೆ. ಗೌಡ, ಕಲ್ಲಹಳ್ಳಿ, ಹಾಸನ, 8277551189
ಪ್ರೀತಿಸೋ ಹುಡುಗ ಹುಡುಗಿಯರು ಯಾವಾಗಲೂ ಮುತ್ತಿನ ಮತ್ತಿನಲ್ಲೇ ಇರುತ್ತಾರೆ. ಆದರೆ ಪ್ರೀತಿಸದೇ ಇರೋರ ಗತಿ ಏನು?
ನೋಡಿ ಕಲಿ, ಮಾಡಿ ನಲಿ!
ಸರ್ವತಿ ರಮೇಶ್ ಹನುಮನಾಳು
ತುಂಬು ಹೃದಯದ ಸ್ವಾಗತ ಎಂದು ಆಹ್ವಾನ ಪತ್ರಿಕೆಯಲ್ಲಿ ಇರುತ್ತೆ. ಹೋದರೂ ಗಮನಿಸುವುದಿಲ್ಲ ಯಾಕೆ?
ಕರೆಯುವಾಗಲೇ ಹೃದಯ ಪೂರ್ತಿ ತುಂಬಿರುವುದರಿಂದ!
ಮಗ್ಗಳ್ಳಿ ಗುರು, ಬನವಾಸಿ, 9480931442
ಹೆಂಡತಿ ತನ್ನ ಬೇಡಿಕೆಗಳನ್ನು ಗಂಡನ ಬಳಿ ಊಟದ ಸಂದರ್ಭದಲ್ಲೇ ಹೇಳುವುದೇಕೆ?
ಆತ ಅಡುಗೆ ಬಗ್ಗೆ ದೂರದಿರಲಿ ಅಂತ!
-ಬಾಣಭಟ್ಟ