ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ಮದುವೆಯಲ್ಲಿ ತಾಳಿಯನ್ನು ಬೆಲ್ಲದ ಮೇಲೆ ಇರಿಸಿರುತ್ತಾರೇಕೆ?

Vishwanath S
Updated On : 30 Jul 2013, 10:50 am

ಮದುವೆಯಲ್ಲಿ ತಾಳಿಯನ್ನು ಬೆಲ್ಲದ ಮೇಲೆ ಇರಿಸಿರುತ್ತಾರೇಕೆ?
ಹಾಗಾದರೂ ಸಂಸಾರ ಸ್ವಲ್ಪ ಸಿಹಿಯಾಗಿರಲಿ ಅಂತ!
ಸರ್ವತಿ ರಮೇಶ್ ಹನುಮನಾಳು

ಮಗ್ಗಳ್ಳಿ ಗುರು, ಬನವಾಸಿ, 9480931442
ಸರ್, ಪೌರೋಹಿತ್ಯವನ್ನು ಹೆಂಗಸರೇಕೆ ಮಾಡಲ್ಲ?
ಅದೊಂದಾದರೂ ಗಂಡಸರಿಗೇ ಅಂತ ಇರಲಿ ಬಿಡಿ ಸ್ವಾಮಿ.

ವಿ. ಹೇಮಂತಕುಮಾರ, ಬೆಂಗಳೂರು, 9035992900
ಹಣವು ಮಾತನಾಡಲಾರಂಭಿಸಿದರೆ ಏನಾಗುತ್ತದೆ?
ಅಕ್ರಮಗಳನ್ನು ಹಣವೇ ಹೊರಗೆಡವಿಬಿಡಬಹುದು!

ಸಿ. ನಾಗರಾಜ, ಅರದೋಟ್ಲು ಭದ್ರಾವತಿ
ಪ್ರತಿಯೊಂದು ಮಹತ್ವದ ಘಟನೆಗೂ ಮೂಲ ಕಾರಣ ಹೆಣ್ಣು. ಆದರೆ ಭಯೋತ್ಪಾದನೆಗೆ ಮೂಲ ಕಾರಣ ಯಾರು?
ಗನ್ನು!

ತಲವಾಟ ಮಂಜು, ಸಾಗರ, 9480931611
ಹೆಂಡತಿ ಎಷ್ಟೇ ಬೈದರೂ ಗಂಡ ಸುಮ್ಮನಿರಲು ಕಾರಣವೇನು ಭಟ್ರೇ?
ಮನೆಯಲ್ಲಿ ಶಾಂತಿ ನೆಲೆಸಬೇಕೆಂದರೆ ಇದು ಅನಿವಾರ್ಯ!


- ಬಾಣಭಟ್ಟ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement