ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ಪ್ರೀತಿಸಿದ ಹುಡುಗಿ ಸಿಕ್ಕಿಬಿಟ್ಟರೆ ಹುಡುಗ ಹಿಗ್ಗಿ ಹೀರೇಕಾಯಿ. ಸಿಗದಿದ್ದರೆ?

Vishwanath S
Updated On : 31 Jul 2013, 10:32 am

ಪ್ರೀತಿಸಿದ ಹುಡುಗಿ ಸಿಕ್ಕಿಬಿಟ್ಟರೆ ಹುಡುಗ ಹಿಗ್ಗಿ ಹೀರೇಕಾಯಿ. ಸಿಗದಿದ್ದರೆ?
ಸೊರಗಿ ಸೋರೇಕಾಯಿ!
ಮಗ್ಗಳ್ಳಿ ಗುರು, ಬನವಾಸಿ, 9480931442

ಹರಳಹಳ್ಳಿಪುಟ್ಟರಾಜು, ಪಾಂಡವಪುರ, 9632838088
ಹೆಚ್ಚು ಅನುಮಾನ ಪಡುವುದು ಗಂಡೋ, ಹೆಣ್ಣೋ?
ಹೆಣ್ಣೇ ಇರಬೇಕೆಂದು ಗಂಡಸರಿಗೆ ಅನುಮಾನ!

ಬಸವನಗೌಡ ಹೆಬ್ಬಳಗೆರೆ, ಚನ್ನಗಿರಿ
'ಬಾಸ್‌' ಪದವು ಸ್ತ್ರೀಲಿಂಗವೋ, ಪುಲ್ಲಿಂಗವೋ?
ಎರಡೂ ಅಲ್ಲ ಅಂದ್ರೆ 'ಬಾಸ್‌' ಬೇಜಾರು ಮಾಡ್ಕೋತಾರೆ!

ಬರ್ಕಲಿರಾಮ್, ಕಿರಗಂದೂರು
ಸಿಡಿಲಿನ ಸದ್ದಿಗೂ, ಹೆಂಡತಿಯ ಲಟ್ಟಣಿಗೆ ಹೊಡೆತಕ್ಕೂ ಏನು ವ್ಯತ್ಯಾಸ?
ಅದು ನಿನಗೇ ಚೆನ್ನಾಗಿ ಗೊತ್ತಿರಬೇಕಲ್ಲ?

ಲಕ್ಷ್ಮಿ ಬರ್ಕಲಿರಮೇಶ ಕಿರಗಂದೂರು, ಮಂಡ್ಯ
ಹೆಣ್ಣಿನ ಸೌಂದರ್ಯಕ್ಕೆ ಸೋಲದವರಾರು ಭಟ್ರೇ?
ಹೆಣ್ಣು!


 -ಬಾಣಭಟ್ಟ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement