ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ಭಗವಂತ ಕೋಲ್ಯನಿಗೆ ಹೇಳಿದ: ನೀನು ಒಬ್ಬ ಗೆಳೆಯನನ್ನು...

Vishwanath S
Updated On : 31 Jul 2013, 10:36 am

ಭಗವಂತ ಕೋಲ್ಯನಿಗೆ ಹೇಳಿದ: ನೀನು ಒಬ್ಬ ಗೆಳೆಯನನ್ನು ಬಿಟ್ಟರೆ ನಿನಗೆ 'ಮೊಬೈಲ್‌' ಕೊಡುತ್ತೇನೆ. ಇಬ್ಬರನ್ನು ಬಿಟ್ಟರೆ 'ರೋಲೆಕ್ಸ್‌' ವಾಚ್ ಕೊಡುತ್ತೇನೆ. ಐವರನ್ನು ಬಿಟ್ಟರೆ '25 ಲಕ್ಷ ರುಪಾಯಿ' ಕೊಡುತ್ತೇನೆ. ಎಲ್ಲಾ ಗೆಳೆಯರನ್ನು ಬಿಟ್ಟರೆ 'ಫೆರಾರಿ' ಕಾರ್ ಕೊಡುತ್ತೇನೆ.
ಕೋಲ್ಯ ಭಗವಂತನಿಗೆ ಉತ್ತರಿಸಿದ: ಹೇ ದಯಾಮಯಿ ಪ್ರಭು, ಕರುಣಾನಿಧಿ, ಭಕ್ತವತ್ಸಲ, ಅನಾಥರಕ್ಷಕ, ಆಪತ್ಬಾಂಧವಾಖಖಖ...ನನ್ನ ಪ್ರತಿ ನೋವು-ನಲಿವುಗಳಲ್ಲಿ ಜೊತೆಯಾದವರನ್ನು, ನಾನು ಅತ್ತಾಗ ನನ್ನ ಕಣ್ಣೀರು ಒರೆಸಿದವರನ್ನು, ಒಂದು ಗ್ಲಾಸ್ ನೀರನ್ನೂ ನನ್ನೊಂದಿಗೆ ಹಂಚಿಕೊಂಡವರನ್ನು, ನನ್ನ ಒಂದು ಕರೆಗೆ ಓಡುತ್ತಾ ಬರುವವರನ್ನು ಯಕಃಶ್ಚಿತ್ ಒಂದು 'ಫೆರಾರಿ' ಕಾರಿನ ಆಸೆಗೆ ಬಿಟ್ಟು ಬಿಡಲೇ? ಆಯ್ತು, ಆದ್ರೆ ಫೆರಾರಿ ಕಾರ್ ಮಾತ್ರ ಕೆಂಪು ಬಣ್ಣದ್ದು ಇರಬೇಕು, ಓಕೆ?!
***
ಹುಡುಗ(ಫೋನಿನಲ್ಲಿ): ಹಾಯ್ ಡಿಯರ್ ತುಂಬಾ ನೆನಪಾಗ್ತಾ ಇದೀಯ..
ಹುಡುಗಿ(ನಾಚುತ್ತಾ): ಯಾಕೆ ಜಾನೂ...ಅಷ್ಟೊಂದು ಪ್ರೀತಸ್ತೀಯಾ ?
ಹುಡುಗ: ಹೂಂ ಮತ್ತೆ! ಎಷ್ಟು ಮಿಸ್ ಮಾಡ್ಕೊಳ್ತಾ ಇದೀನಿ ಗೊತ್ತಾ?
ಹುಡುಗಿ: ಐದು ನಿಮಿಷದ ಹಿಂದೇನೇ ಫೋನ್‌ನಲ್ಲಿ ಮಾತಾಡಿದ್ವಲ್ಲ ಮುದ್ದು...
ಹುಡುಗ: ಥೋತ್ತೆರಿಕಿ! ಮತ್ತೆ ನಿನಗೇ ಫೋನ್ ಮಾಡ್ಬಿಟ್ನಾ?

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments