ವಾರಕ್ಕೊಮ್ಮೆ ಹೊಸ ಸಿನಿಮಾ ಕಟೌಟ್, ವಾರ ಕಳೆಯುವ ಮೊದಲೇ ಔಟ್
ಚಿತ್ರ ನಿರ್ಮಾಣಕ್ಕೊಂದೇ ಅಲ್ಲ; ಕೆಲವೊಮ್ಮೆ ಚಿತ್ರ ಶತದಿನ ಕಾಣಲೂ ನಿರ್ಮಾಪಕ ಖರ್ಚು ಮಾಡಬೇಕಾಗುತ್ತದೆ.
ಗೆದ್ದ ನಟರನ್ನು ತಾರೆಯರು ಎನ್ನುತ್ತಾರೆ. ತೋಪಾದ ತಾರೆಯರನ್ನು ಅಮಾವಾಸ್ಯೆಯ ಚಂದ್ರನಿಗೆ ಹೋಲಿಸುವುದೇ ಸೂಕ್ತ
ಹೀರೋ ಎಂದರೆ ಅತಿಮಾನುಷ ಶಕ್ತಿಯುಳ್ಳವನೆಂದೂ ಮತ್ತು ಆ ಶಕ್ತಿಯನ್ನೆಲ್ಲ ಪ್ರಿಯತಮೆಯನ್ನು ತನ್ನವಳನ್ನಾಗಿಸಿಕೊಳ್ಳಲೆಂದೇ ಮೀಸಲೆಂದು ಬಿಂಬಿಸಲ್ಪಡುವ ಒಂದು ಮಾಧ್ಯಮ
ಸಿನಿಮಾಗಳಲ್ಲಿ ಎರಡು ವಿಧ. ಪ್ರಶಸ್ತಿ ಗಳಿಸುವ ಸಿನಿಮಾ ಮತ್ತು ಜನ ಮೆಚ್ಚುವ ಉತ್ತಮ ಸಿನಿಮಾ
ಚಿತ್ರಗೀತೆಗಳ ಮೂಲಕ ಪ್ರೇಕ್ಷಕರನ್ನು ಹುಚ್ಚೆಬ್ಬಿಸುವ ಸಾಧನ
ಕೊನೆಗೂ ಕತೆ ಏನೆಂಬುದೇ ತಿಳಿಯದಿದ್ದರೆ ಅದು ಕನ್ನಡ ಸಿನಿಮಾವೇ ಆಗಿರಬೇಕು.
ಸಿನಿಮಾದವರೆಲ್ಲ ಸಂಭಾವನೆ ಸ್ವೀಕರಿಸುವ ಸಂಭಾವಿತರೆಂದೇ ಅನ್ನಬೇಕು
ಸಿನಿಮಾದಲ್ಲಿ ಹೆಚ್ಚು ಹೆಚ್ಚು ಹೆಣ ಬೀಳಿಸಿದಷ್ಟು ಹಣ ಬರುತ್ತದೆಂಬುದು ನಂಬಿಕೆ
ಸಿನಿಮಾವನ್ನು ಸಲೀಸಾಗಿ ನಿರ್ಮಿಸಿದವರೂ ಅದಕ್ಕೊಂದು ಹೆಸರಿಡಲು ಕಷ್ಟ ಪಡಬೇಕಾಗುತ್ತದೆ.
-ವಿಶ್ವನಾಥ ಸುಂಕಸಾಳ
vishwasunkasal@yahoo.com