ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ತಪ್ಪಾಯ್ತು ತಿದ್ಕೋತೀವಿ

Vishwanath S
Updated On : 4 Jun 2013, 10:10 am

ಮೈಸೂರಿನಿಂದ ನಾಗರಾಜ ಎಚ್.ಸಿ. ಅವರು ಬರೆಯುತ್ತಾರೆ- 'ಸರ್, 'ತಪ್ಪಾಯ್ತು ತಿದ್ಕೋತೀವಿ'ಯಲ್ಲಿ ಕ್ರೀಡಾ ಪುಟದ ತಪ್ಪುಗಳ ಕುರಿತು ಬರೆಯವ ಬದಲು ಕ್ರೀಡಾ ಪುಟದ ಮೇಲೆ ಖಾಯಂ ಆಗಿ 'ತಪ್ಪಾಯ್ತು' ಅಂತ ಪ್ರಕಟಿಸಿಬಿಡಿ.'
'ಯಾಕೆಂದರೆ, ಮೇ 28ರಂದು ಕ್ರೀಡಾ ವರದಿಯಲ್ಲಿ 'ನಡಾಲ್ 2ನೇ ಸುತ್ತಿಗೆ' ಸರಿಯಾಗಿದೆ. ಆದರೆ ತ್ಸೊಂಗಾ ಫ್ರಾನ್ಸ್ ದೇಶದವರು. ಅವರು ಯಾವಾಗ ಸ್ವಿಟ್ಜರ್‌ಲ್ಯಾಂಡ್ ದೇಶಕ್ಕೆ ಸೇರಿದರು ಅಂತ ಗೊತ್ತಾಗಿಲ್ಲ. ಹಾಗೆಯೇ ಲಾ ನಾ ಅಂತ ಹೇಳಿ ಮರಿಯಾ ಶೆರಪೋವಾ ಫೋಟೊ ಪ್ರಕಟಿಸಲಾಗಿದೆ.'
'ಕ್ರೀಡಾ ಪುಟಕ್ಕೆ ಸಂಬಂಧಿಸಿದಂತೆ ನನ್ನದೊಂದು ಚಿಕ್ಕ ಸಲಹೆ. ರೊಲ್ಯಾಂಡ್ ಗೆರ್ರೋಸ್ ರಿಸಲ್ಟ್ ಅಂತ ಗೂಗಲ್‌ನಲ್ಲಿ ಟೈಪ್ ಮಾಡಿದರೆ, ಪುರುಷರ ಮತ್ತು ಮಹಿಳೆಯರ ಟೆನ್ನಿಸ್ ರಿಸಲ್ಟ್ಸ್ ಸಿಗುತ್ತೆ. ಅದನ್ನಾದರೂ ದಯವಿಟ್ಟು ಪ್ರಕಟಿಸಿ' ಎಂದಿದ್ದಾರೆ.
ಮೈಸೂರಿನ ಕೃಷ್ಣಮೂರ್ತಿಪುರಂನಿಂದ ಎಸ್. ರಾಘವೇಂದ್ರ ಅವರು ಬರೆಯುತ್ತಾರೆ- 'ಕರ್ನಾಟಕವನ್ನು 'ಜಲಕ್ಷಾಮ' ಕಾಡುತ್ತಿರುವಂತೆ 'ಕನ್ನಡಪ್ರಭ' ಕ್ರೀಡಾ ಪುಟವನ್ನು 'ಸುದ್ದಿ ಕ್ಷಾಮ' ಕಾಡುತ್ತಿರುವಂತಿದೆ. ಜಾಗತಿಕ ಕ್ರಿಕೆಟ್ ಎಂಬುದು ನಿತ್ಯೋತ್ಸವ ಇದ್ದಂತೆ. ಪ್ರಪಂಚದ ಒಂದಲ್ಲ ಒಂದು ಕಡೆ ಕ್ರಿಕೆಟ್ ಸರಣಿ ನಡೆದೇ ಇರುತ್ತೆ. ಹೀಗಾಗಿ ಇಂಗ್ಲೆಂಡ್‌ನಲ್ಲಿ ಆಂಗ್ಲರು ಕಿವೀಸ್ ಜತೆ ಸೆಣಸುತ್ತಿದ್ದಾರೆ.'
'ಈ ಟೆಸ್ಟ್ ಪಂದ್ಯದ ದೀರ್ಘ ವರದಿ, ಸಾಲದ್ದಕ್ಕೆ ಎರಡು ವರ್ಣಚಿತ್ರಗಳನ್ನು ಮೇ 27ರ ಸಂಚಿಕೆಯಲ್ಲಿ ನೋಡಿ ದಿಗ್ಭ್ರಮೆ ಆಯ್ತು. ಟೆಸ್ಟ್ ಪ್ರಾರಂಭವಾಗಿ 3 ದಿನ ಕಳೆದಿದೆ. ಮೊದಲೆರಡು ದಿನದ ಆಟದ ಜಾಡೇ 'ಕನ್ನಡಪ್ರಭ' ಓದುಗರಿಗೆ ಗೊತ್ತಿಲ್ಲ. ಹೀಗಿರುವಾಗ ಮೂರನೇ ದಿನದ ಆಟವನ್ನು ಅತಿಯಾಗಿ ಹೈಲೈಟ್ ಮಾಡಿದ್ದಾದರೂ ಏಕೆ?'
'ಎಷ್ಟಾದರೂ ನಮ್ಮವರು ಆಡುವ ಕ್ರಿಕೆಟ್ ನಮಗೆ ಹೆಚ್ಚು. ಹೀಗಿರುವಾಗ ಪರ ರಾಷ್ಟ್ರಗಳು ಆಡಿಕೊಳ್ಳುವ ಕ್ರಿಕೆಟ್ ನಮಗೆ ಅಪ್ಯಾಯಮಾನ ಆಗುವುದಿಲ್ಲ. ಕ್ರೀಡಾಭಿಮಾನಿ ಓದುಗರು ಒಮ್ಮೆ ಕಣ್ಣು ಹಾಯಿಸಬಹುದು ಅಷ್ಟೇ. ಇದೇ ಹೊತ್ತಿನಲ್ಲಿ ಐಪಿಎಲ್ ಫೈನಲ್ ಪಂದ್ಯ ನಡೆದಿದ್ದು, ಅದರ ವಿವರ ಒಳಪುಟ ಸೇರಿದೆ. ಪ್ರಕಟಿಸಿರುವ ಚಿತ್ರವೂ ಕಪ್ಪು-ಬಿಳುಪು. ಫಿಕ್ಸಿಂಗ್‌ನಿಂದಾಗಿ ಬೇಸತ್ತು 'ಕನ್ನಡಪ್ರಭ' ವರದಿಯನ್ನು ಕಡೆಗಣಿಸಿದೆಯೇನೊ ಅನ್ನಿಸಿತು. ನಮ್ಮವರು ಆಡುವ ಆಟ ಕಡೆಗಣಿಸಿ, ಹೊರರಾಷ್ಟ್ರದವರು ಆಡುವ ಆಟಕ್ಕೆ ಮಣೆ ಹಾಕಿದ್ದು ಯಾಕೆ?' ಎಂದು ಪ್ರಶ್ನಿಸಿದ್ದಾರೆ.
ಐಪಿಎಲ್ ಪಂದ್ಯ ನಡೆಯುತ್ತಿದ್ದಿದ್ದೇ ರಾತ್ರಿ. ಅದು ಮುಗಿಯುವ ಹೊತ್ತಿಗೆ ಪತ್ರಿಕೆ ಮುದ್ರಣಕ್ಕೆ ಹೋಗಿ ಆಗಿರುತ್ತದೆ. ಅಂತಹ ಸುದ್ದಿಯನ್ನು ಹಿಂಬದಿ ಪುಟಕ್ಕೆ ಅದರಲ್ಲೂ ಬಣ್ಣದ ಪುಟಕ್ಕೆ ತೆಗೆದುಕೊಳ್ಳುವುದು ಕಷ್ಟ. ಬಣ್ಣದ ಪುಟ ಬದಲಾಯಿಸಬೇಕೆಂದರೆ ಅದಕ್ಕೆ ಸಾಕಷ್ಟು ವೆಚ್ಚವಾಗುತ್ತದೆ. ಈ ದೃಷ್ಟಿಯಿಂದ ತಡ ರಾತ್ರಿಯ ಪಂದ್ಯಗಳನ್ನು ಒಳ ಪುಟದಲ್ಲಿ ಪ್ರಕಟಿಸಲಾಗುತ್ತದೆ. ಆದರೆ ಮೊದಲೆರಡು ದಿನದ ಆಟದ ಕುರಿತು ಸುದ್ದಿ ಪ್ರಕಟಿಸದೇ, ಏಕಾಏಕಿ ಮೂರನೇ ದಿನದ ಆಟದ ಸುದ್ದಿಯನ್ನು ಭರ್ಜರಿಯಾಗಿ ಪ್ರಕಟಿಸಿದ್ದು ಸರಿಯಲ್ಲ ಎಂಬ ಮಾತನ್ನು ಒಪ್ಪಲೇಬೇಕಾಗುತ್ತದೆ.

 -ವಿಶ್ವೇಶ್ವರ ಭಟ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement