ಸಂಪಾದಕೀಯ

ಶಿಕ್ಷಕ

ದಂಡಧಾರಿ  
    ತನಗೆ ಕಲಿಸಿದ ಶಿಕ್ಷಕರು ಹೇಗೆಲ್ಲ ಶಿಕ್ಷಿಸುತ್ತಿದ್ದರು ಎಂದು ವಿವರಿಸುವ ಮೂಲಕ ತಾನು ತುಂಬಾ ಸೌಮ್ಯ ಸ್ವಭಾವದವನೆಂದು ತೋರಿಕೊಳ್ಳುವವ
    ಮೊದಲಿನ ಕಾಲದಲ್ಲಾದ್ರೆ ಶಿಕ್ಷಿಸುವವನೇ ಶಿಕ್ಷಕನಾಗಿದ್ದ..ಈಗ ವಿದ್ಯಾರ್ಥಿಗಳ ತಪ್ಪಿಗೆ ಶಿಕ್ಷೆ ಅನುಭವಿಸುವವ ಯಾವನೋ ಅವನೇ ಶಿಕ್ಷಕ
    ಬುದ್ದುಗಳನ್ನೆಲ್ಲ ಬುದ್ಧಿವಂತರನ್ನಾಗಿಸುವ ಗುತ್ತಿಗೆ ಪಡೆದವ
    ಕಡಿಮೆ ಸಂಬಳಕ್ಕೆ ಮಕ್ಕಳ ಸಿಂಬಳ ಒರೆಸಬೇಕಾದ ಕೆಲಸ ಈತನಿಗೆ..
    ಭವಿಷ್ಯದ ಕಾಲೇಜು ಹುಡುಗರ ನಿರ್ಮತ
    ತನಗೆ ತಿಳಿಯದುದನ್ನು ಮಕ್ಕಳಿಗೂ ತಿಳಿಯದಂತೆ ಹೇಳುವವ
    ಎಲ್ಲ ಶಿಕ್ಷಕರೂ ಗುರುವಲ್ಲ ಆದರೆ ಗುರುಗಳೆಲ್ಲ ಶಿಕ್ಷಕರೇ..
    ವಿದ್ಯಾದಾತ...ಅಥವಾ ಸರಸ್ವತಿಯ ಏಜೆಂಟ್
    ಶಾಲೆಗೆ ಬನ್ನಿ ಬನ್ನಿ ಎಂದು ಮಕ್ಕಳನ್ನು ಕರೆದು ತಂದು ಪಾಠ ಮಾಡಬೇಕಾದ ಕರ್ಮ ಕೆಲವರದ್ದು
    ತನ್ನ ವಿಷಯದಲ್ಲಿ ಮಾಸ್ಟರ್ ಅಲ್ಲದಿದ್ದರೂ ಮೇಷ್ಟ್ರು ಈತ
    ಕನ್ನಡ ಶಾಲೆಯ ಟೀಚರ್‌ಗೂ ಇಂಗ್ಲಿಷ್ ಬರಬೇಕಾಗುತ್ತದೆ
    ನಮಗೆಲ್ಲ ಶಿಕ್ಷಕರೆಂದರೆ ರೋಲ್(ಪಟ್ಟಿ) ಮಾಡೆಲ್ ಆಗಿದ್ದರು. ಈಗ ಮಕ್ಕಳೇ ಬಡಿಗೆ ಹಿಡಿದರೂ ಸುಮ್ಮನಿರಬೇಕಾದ ಗತಿ ಈತನದು   

-ವಿಶ್ವನಾಥ ಸುಂಕಸಾಳ
vishwasunkasal@yahoo.com


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಎಲ್ಲವನ್ನೂ ತಡೆಯಲು ಸಾಧ್ಯವಿಲ್ಲ': CJP ದೆಹಲಿ ಪ್ರತಿಭಟನೆಗೆ ನಿರ್ಬಂಧ ಕುರಿತು ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ಚಾಟಿ

'ಮಕ್ಕಳನ್ನು ಪ್ರತಿಭಟನೆಗಳಿಂದ ದೂರವಿಡಿ': ದೆಹಲಿ ಪ್ರತಿಭಟನೆಗೆ ಸಿದ್ಧತೆ, ಮಸೀದಿ ಮೈಕ್‌ನಲ್ಲಿ ಪೊಲೀಸರ ಮನವಿ! Video

ಭಾರತೀಯ ಮೂಲದ ನ್ಯಾಯಶಾಸ್ತ್ರಜ್ಞೆಗೆ ಈ ಬಾರಿಯ ನೊಬೆಲ್ ಶಾಂತಿ ಪ್ರಶಸ್ತಿ; ನವನೇತಮ್ ನವಿ ಪಿಳ್ಳೈಗೆ ಒಲಿದ ನೊಬೆಲ್ ಶಾಂತಿ ಗರಿ

Ramayana: ಕೊನೆಗೂ 'ರಾಮಾಯಣ' ರಿಲೀಸ್ ಡೇಟ್ ಫಿಕ್ಸ್; ದೀಪಾವಳಿಗೂ ಮೊದಲೇ ಬಿಡುಗಡೆ

ಯಮನಿಗೇ ಚಳ್ಳೇಹಣ್ಣು: ಗುದ್ದಿದ ಲಾರಿಯನ್ನೇ ಹಿಡಿದು ಪ್ರಾಣ ಉಳಿಸಿಕೊಂಡ ಯುವತಿ!-ರೋಚಕ Video