ಅಕ್ರಮ - ಸಕ್ರಮ ಸರಿಯಲ್ಲ
ಸರ್ಕಾರಕ್ಕೆ ಸೇರಿದ ಭೂಮಿಯಲ್ಲಿ ಅಕ್ರಮವಾಗಿ ಮನೆ ಕಟ್ಟಿಕೊಂಡವರಿಗೆ, ಆ ಜಮೀನಿನ ಮೇಲೆ ಹಕ್ಕು ನೀಡಲು, ಸರ್ಕಾರಕ್ಕೆ ಅಧಿಕಾರ ನೀಡುವ ವಿಧೇಯಕವನ್ನು...
ಸರ್ಕಾರಕ್ಕೆ ಸೇರಿದ ಭೂಮಿಯಲ್ಲಿ ಅಕ್ರಮವಾಗಿ ಮನೆ ಕಟ್ಟಿಕೊಂಡವರಿಗೆ, ಆ ಜಮೀನಿನ ಮೇಲೆ ಹಕ್ಕು ನೀಡಲು, ಸರ್ಕಾರಕ್ಕೆ ಅಧಿಕಾರ ನೀಡುವ ವಿಧೇಯಕವನ್ನು ರಾಜ್ಯಪಾಲ ಹಂಸರಾಜ ಭಾರದ್ವಾಜ್ ಅವರು ವಿಧಾನಸಭೆಗೆ ಹಿಂದಕ್ಕೆ ಕಳುಹಿಸಿರುವುದು ಸರಿಯಾದ ನಿರ್ಧಾರವೇ.
ಮಹಾನಗರಗಳ ಸಮೀಪದ ಸುತ್ತಮುತ್ತಲ ಸರ್ಕಾರಿ ಭೂಮಿಯನ್ನು ಯಾರಾದರೂ ಕಬಳಿಸಿದ್ದರೆ, ಅವರು ಅಲ್ಲಿ ಎಷ್ಟೇ ವರ್ಷಗಳಿಂದ ವಾಸ ಮಾಡುತ್ತಿದ್ದರೂ, ಅದು ಇಂದಿನ ಭೂಮಿಯ ಬೆಲೆಯ ಲೆಕ್ಕದಲ್ಲಿ "ಲೂಟಿ" ಎಂದೇ ಭಾವಿಸಬೇಕು.
ಇಂತಹ ವಿಧೇಯಕಗಳು ಇತರ ರಾಜ್ಯಗಳಲ್ಲೂ ತಿರಸ್ಕೃತವಾಗಿರುವುದು ನಿಜ. ತೀರ ಕಡುಬಡವರಿಗೆ, ಅತ್ಯಲ್ಪ ವಿಸ್ತೀರ್ಣದ ಜಾಗದ ಕಬಳಿಕೆಯನ್ನು ಸಕ್ರಮಗೊಳಿಸಬಾರದೇಕೆ ಎನ್ನುವುದು ಮಾನವೀಯತೆಯ ದೃಷ್ಟಿಕೋನದಿಂದ ಸರಿ ಎನಿಸಿದರೂ, ವಾಸ್ತವದಲ್ಲಿ ಇಂತಹ ಅಕ್ರಮ ನಡೆದಿರುವುದು ಭೂ ಮಾಫಿಯಾಗಳಿಂದಲೇ.
ರಾಜ್ಯ ಸರ್ಕಾರ ಹಿಂದೆ ನೇಮಿಸಿದ್ದ ವಿ. ಬಾಲಸುಬ್ರಹ್ಮಣ್ಯ ಆಯೋಗದ ವರದಿಯಲ್ಲಿ ರಾಜ್ಯದಲ್ಲಿ ಸುಮಾರು 11 ಲಕ್ಷ ಎಕರೆ ಸರ್ಕಾರಿ ಭೂಮಿ ಕಬಳಿಕೆಯಾಗಿರುವ ಉಲ್ಲೇಖವಿದೆ. ವಿಧಾನ ಮಂಡಲವೇ ನೇಮಿಸಿದ್ದ ಬೆಂಗಳೂರಿನ ಮಟ್ಟಿಗೆ ಇಂತಹ ಪ್ರಕರಣಗಳ ತನಿಖೆಗೆ ನೇಮಿಸಿದ್ದ ಎ.ಟಿ. ರಾಮಸ್ವಾಮಿ ಸಮಿತಿಯ ಮೊದಲ ವರಿದಿಯೇ ಭಯಾನಕವಾಗಿತ್ತು.
ಅಕ್ರಮ-ಸಕ್ರಮ ನಿಯಮ ಕಟ್ಟಡಗಳ ನಿರ್ಮಾಣದ ನಿಯಮಗಳ ಉಲ್ಲಂಘನೆಗೆ ಅನ್ವಯವಾಗುವ ವಿಚಾರ ಬೇರೆ, ಸರ್ಕಾರಿ ಭೂಮಿಯನ್ನು ಕಬಳಿಸುವುದನ್ನು ಅಧಿಕೃತಗೊಳಿಸುವ ವಿಚಾರ ಬೇರೆ. ಈಗಿನ ಸರ್ಕಾರ ಈ ವಿಷಯವನ್ನು ಸೂಕ್ತ ರೀತಿಯಲ್ಲಿ ನಿಭಾಯಿಸಬೇಕು. ಕಾಯಿದೆಯ ಉಲ್ಲಂಘನೆಗೆ ಉತ್ತೇಜನ ಕೊಡಬಾರದು.