ಲಾಗಳನ್ನೆಲ್ಲ ಪಾಲಿಸಲು ಹೊರಟವನ ಪಾಲಿಗೆ ಲಾಸ್ ಆಗುವುದೇ ಪ್ರತಿಫಲ
ಅನರ್ಥಗಳ ನಿಯಂತ್ರಿಸುವ ಅನರ್ಥಕೊಶ
ದೊಡ್ಡವರ ಉಳ್ಳವರ ಕಾವಲುಗಾರ
ಶ್ರೀಸಾಮಾನ್ಯನ ಪೇಡಂಭೂತ
ಅತಿಯಾದರೆ ಇದು ಪ್ರಜಾಪ್ರಭುತ್ವದ ಕಾಯಿಲೆ
ಆಗಾಗ ಕಳಚಿ ಬೀಳುವ ಮತ್ತು ಹೊಲ ಮೇಯುವ ಬೇಲಿ
ನಮ್ಮ ಕುತ್ತಿಗೆಗೆ ಕಟ್ಟಿಕೊಂಡಿರುವ ಪಾಶ
ಪ್ರಜಾಪ್ರಭುತ್ವ
ದಿಕ್ಕಿಲ್ಲದವರನ್ನು ದಿಕ್ಕೆಡಿಸುವ ತಂತ್ರ
ಪ್ರಜಾ (ಕು)ತಂತ್ರ
ಸ್ವಿಸ್ ಬ್ಯಾಂಕಿನ ಲಾಭದಲ್ಲಿ ನಮ್ಮ ಪ್ರಜಾಪ್ರಭುತ್ವದ ದೊಡ್ಡ ಕೊಡುಗೆಯಿದೆ
ಪ್ರಜೆಗಳನ್ನು ಮೂರ್ಖರನ್ನಾಗಿಸುವ ಶತಮೂರ್ಖರು ಆಳ್ವಿಕೆ ನಡೆಸುವ ಪ್ರಕ್ರಿಯೆ
ಅರೆಬೆಂದ ಖಾದ್ಯ. ಬಿಟ್ಟರೆ ಅಷ್ಟಕ್ಕೂ ಗತಿಯಿಲ್ಲ. ತಿಂದರೆ ಅಜೀರ್ಣ
-ವಿಶ್ವನಾಥ ಸುಂಕಸಾಳ
vishwasunkasal@yahoo.com