ಹೆಣ್ಣು ಸಂಸಾರದ ಕಣ್ಣು ಎನ್ನುತ್ತಾರೆ, ಗಂಡು?
ಆರ್. ಎನ್. ಖೇಡಗಿ, ಹೀರೆಮಸಳಿ
ಬಸ್ಸಿನಲ್ಲಿ ಕುಳಿತಾಗ ಹುಡುಗಿಯರಿಗೆ ಸ್ವಲ್ಪ ಮೈ ತಾಗಿದರೆ ಸಿಡುಕುತ್ತಾರಲ್ಲ?
ಸುಮ್ಮನಿದ್ದರೆ, 'ಅವರು ಅದರಿಂದ ಖುಷಿಪಟ್ಟರಾ' ಅಂತಲೂ ಕೇಳುತ್ತೀರಿ!
ಕಂಚಗನಹಳ್ಳಿ ಧನಂಜಯ, 9141308498
ಕೆಲ ರಾಜಕಾರಣಿಗಳು ಐವತ್ತು ವರ್ಷಗಳಿಂದಲೂ ಇದೇ ನನ್ನ ಕೊನೆಯ ಚುನಾವಣೆ ಎಂದು ಹೇಳಿಕೊಂಡೇ ಬಂದಿದ್ದಾರಲ್ಲ?
ನಾಯಕನಾದವನು ಜನರಲ್ಲಿ ಆಶಾಭಾವ ಹುಟ್ಟಿಸಬೇಕು ಎಂಬ ಹೇಳಿಕೆಯನ್ನು ಅವರು ಹಾಗೆ ಅರ್ಥೈಸಿಕೊಂಡಿದ್ದಾರೆ!
ರವಿಕುಮಾರ್ ಜಿ. ಬಿ. 9449669897
ಹೆಣ್ಣು ಸಂಸಾರದ ಕಣ್ಣು ಎನ್ನುತ್ತಾರೆ, ಗಂಡು?
ಕನ್ನಡಕ ಎನ್ನೋಣ ಬಿಡಿ, ನಿಮಗ್ಯಾಕೆ ಬೇಜಾರು?
ನೇರಲಗುಡ್ಡ ಶಿವಕುಮಾರ, 9480343742
'ಕನಸು'ಗಳಿಗೂ 'ಗುರಿ'ಗಳಿಗೂ ಇರುವ ಸಾಮ್ಯತೆ ಏನು?
ದೂರದಿಂದ ಎರಡೂ ಸುಲಭದ ತುತ್ತು ಅಂತಲೇ ಅನಿಸುತ್ತವೆ.
ಕೆ. ಎಂ. ಲಿಂಗರಾಜು 9916021365
ಕ್ಲಿಷ್ಟ ಪ್ರಶ್ನೆಗಳಿಗೂ ಸಮಂಜಸ ಉತ್ತರ ನೀಡುವ ನಿಮಗೆ ಸ್ಫೂರ್ತಿ ಯಾರು?
ಅಯ್ಯೋ, ಯಾವ ಸ್ಫೂರ್ತಿಯ ಬಗ್ಗೆ ಹೇಳಲಿ ಅನ್ನೋದೆ ಗೊಂದಲ!
-ಬಾಣಭಟ್ಟ