ಮನೆಯಲ್ಲಿ ಅಂದದ ಹೆಂಡತಿ ಇದ್ದರೂ ಗಂಡಸರು ಚೆಂದದ ಹುಡುಗಿ ಕಂಡಾಗ ನೋಡುವುದಿಲ್ಲವೇ?
ಫ್ಯಾಷನ್ ಡಿಸೈನರ್ ಮಧು, 9945737427
ಮನೆಯಲ್ಲಿ ಎಷ್ಟೇ ಚೆಂದದ ಸೀರೆಗಳಿದ್ದರೂ ಸೀರೆ ಅಂಗಡಿಯ ಮುಂದೆ ಹೊಸ ಸೀರೆ ಕಂಡಾಗ ಚೆಲುವೆವರು ಕಣ್, ಕಣ್ಬಿಟ್ಟುಕೊಂಡು ನೋಡ್ತಾ ನಿಲ್ಲುತ್ತಾರಲ್ಲ ಯಾಕೆ?
ಮನೆಯಲ್ಲಿ ಅಂದದ ಹೆಂಡತಿ ಇದ್ದರೂ ಗಂಡಸರು ಚೆಂದದ ಹುಡುಗಿ ಕಂಡಾಗ ನೋಡುವುದಿಲ್ಲವೇ?
ಓಂ ಚನ್ನೇಶ್ ಅರಬಿಳಚಿಕ್ಯಾಂಪ್, ಭದ್ರಾವತಿ, 9900739725
'ಮೊದಲ ರಾತ್ರಿ'ಯಿದ್ದಂತೆ ಮೊದಲ ಹಗಲು ಏಕೆ ಇಲ್ಲ?
'ಆ' ವಿಷಯಕ್ಕೆ ಸಂಬಂಧಿಸಿದಂತೆ ಅಧಿಕೃತ ಮಾರ್ನಿಂಗ್ ಶೋಗಳಿಲ್ಲ!
ವಿ. ಹೇಮಂತಕುಮಾರ, ಬೆಂಗಳೂರು, 9916707979
ಫೇಸ್ಬುಕ್ನಲ್ಲಿ ಸಿಕ್ಕಿದವಳು ಫೇಸ್ ಟು ಫೇಸ್ ಕಾಣ್ತಿಲ್ಲವಲ್ಲ?
ಫೇಸ್ಬುಕ್ನಲ್ಲಿ ಹಾಕಿದ ಫೋಟೊ ಅಸಲಿ ಅಲ್ಲ ಅನ್ಸುತ್ತೆ ಹುಶ್ಶಾರ್.
ದೀಪಾ ರಾಜ್, ಅರಕಲಗೂಡು
ತುಂಬಾ ದಿನಗಳ ನಂತರ 'ಕೇಳ್ರಪ್ಪೋ ಕೇಳಿ'ಯಲ್ಲಿ ಗೋರೂರು ನಾಗ ಹೆಡೆಯೆತ್ತಿದ್ದಾನಲ್ಲ?
ಇನ್ನೆರಡು ತಿಂಗಳಿಗೆ ಬಂತಲ್ಲ ನಾಗರಪಂಚಮಿ.
ಗೊರೂರು ನಾಗ, 9480783803
ಸಿನಿಮಾ ನಟಿಯರೇಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ?
ತಮ್ಮ ಜೀವನದ ಹೀರೋನೇ ವಿಲನ್ ಎಂದು ಗೊತ್ತಾದಾಗ!
ಬಾಣಭಟ್ಟ