ಆ ಕಾಲದ ರಾಜನಿಗೂ ಈ ಕಾಲದ ರಾಜಕಾರಣಿಗೂ ಏನು ವ್ಯತ್ಯಾಸ?
ಪರಮೇಶ್ವರ ಹೊಡೇನೂರು, ರಾಯಚೂರು
ಆ ಕಾಲದ ರಾಜನಿಗೂ ಈ ಕಾಲದ ರಾಜಕಾರಣಿಗೂ ಏನು ವ್ಯತ್ಯಾಸ?
ಅವರು ಅಧಿಕೃತವಾಗಿ ವಂಶಪಾರಂಪರ್ಯ ಆಡಳಿತ ನಡೆಸುತ್ತಿದ್ದರು. ಇವರದ್ದು ಅನಧಿಕೃತವಾಗಿ.
ಗೊರೂರು ನಾಗ, 9480783803
ಹದಿನೆಂಟಕ್ಕೂ ಅರಳು-ಮರುಳು ಶುರುವಾಗುತ್ತಾ?
ಹದಿನೆಂಟಕ್ಕೆ ಶುರುವಾಗೋದು ಮರುಳು ಮಾಡೋದು ಮತ್ತು ಮರುಳು ಆಗೋದು!
ಹೊಕ್ಕಳ ಮೇಲೆ ದ್ರಾಕ್ಷಿಯಿಡೋ ಕಾಲ ಮುಗೀತು ಅಂತಿದ್ದಾರಲ್ಲ ರವಿಚಂದ್ರನ್?
ಈಗ ಮಾವಿನ ಹಣ್ಣಿನ ಸೀಸನ್.
ಬಸವನಗೌಡ ಹೆಬ್ಬಳಗೆರೆ, ಚನ್ನಗಿರಿ
ನಿಮ್ಮ ಹಿಟ್‌ಲಿಸ್ಟ್‌ನಲ್ಲಿ ಯಾರಿದ್ದಾರೆ?
ಅಕ್ಕಿಯನ್ನು ಮಾತ್ರ ನಾನು ಹಿಟ್ಟು ಮಾಡಿಸೋಕೆ ಕೊಡೋದು, ದೋಸೆಗಿರಲಿ ಅಂತ!
ಕಂಚಗನಹಳ್ಳಿ ಧನಂಜಯ, 9141308498
ಚುನಾವಣಾ ಸಮಯದಲ್ಲಿ ಸೀರೆ, ವಸ್ತ್ರ ಹಂಚುತ್ತಾರಲ್ಲ?
ನಂತರ ಮಾನ ಹರಾಜು ಹಾಕುವುದಕ್ಕೆ.
ಬಾಣಭಟ್ಟ