ಭಾರೀ ಮಳೆಗೆ ಆಗುಂಬೆ ಪ್ರಸಿದ್ಧಿ. ಭಾರೀ ಪ್ರೀತಿಗೆ?
ಹರಳಹಳ್ಳಿ ಪುಟ್ಟರಾಜು, ಪಾಂಡವಪುರ, 9632838088
ಭಾರೀ ಮಳೆಗೆ ಆಗುಂಬೆ ಪ್ರಸಿದ್ಧಿ. ಭಾರೀ ಪ್ರೀತಿಗೆ?
ಆಗುಂಬೆಯ ಪ್ರೇಮ ಸಂಜೆ!
ಫ್ಯಾಷನ್ ಡಿಸೈನರ್ ಮಧು, 9945737427
ಹೆಣ್ಣಿನ ಮನಸ್ಸು 'ಟಚ್‌ಸ್ಕ್ರೀನ್'ನಂತೆ ಮುಟ್ಟಿದ ಕೂಡಲೇ ತೆರೆದುಕೊಳ್ಳುವುದಿಲ್ಲ ಏಕೆ?
ಪ್ರೊಡಕ್ಷನ್ ಮಿಸ್ಟೇಕ್ ಇರಬೇಕು. ಕಸ್ಟಮರ್ ಕೇರ್ ಸಂಪರ್ಕಿಸಿ!
ಸರಸ್ವತಿ ರಮೇಶ, ಹನುಮನಾಳು
ಅನುಭವ ಮಂಟಪದಿಂದ ಕಲ್ಯಾಣ ಮಂಟದವರೆಗೂ ಎಷ್ಟು ದೂರವಾಗುವುದು ಭಟ್ಟರೇ?
ಕಲ್ಯಾಣ ಮಂಟಪದಿಂದ ಅನುಭವ ಮಂಟಪ ತುಂಬ ಹತ್ತಿರ!
ಜಗದೀಶ ಎಸ್. ಬೆಳಗಾವಿ, 8722444410
ಫುಲ್ ಟಾಕ್‌ಟೈಂ ಇದೆ. ನಿಮ್ಮ ನಂಬರ್‌ಗೆ ಕರೆನ್ಸಿ ಬಿಡಲಾ ಭಟ್ರೇ?
ನಂದು ಪೋಸ್ಟ್‌ಪೇಯ್ಡು. ಆಗಾಗರೀಚಾರ್ಜ್ ಬೇಕಾಗಲ್ಲ.
ಊಟ ಬಲ್ಲವನಿಗೆ ರೋಗವಿಲ್ಲ. ಮಾತು ಬಲ್ಲವನಿಗೆ ಜಗಳವಿಲ್ಲ. ಪ್ರೀತಿ ಬಲ್ಲವನಿಗೆ?
ವಿರಹವಿಲ್ಲ!
ಬಾಣಭಟ್ಟ