ಸೋತಾಗ ಬೇಡವೆಂದರೂ ಸಿಗುವ ಪಾಠ ಭವದ ಬಗೆಗಿನ ಜ್ಞಾನ ಅನುಭಾವದ ಸೋಪಾನ ಅನುಭೋಗದ ಫಲಿತ ಅನನುಭವಿ ಜ್ಞಾನಿಗಿಂತಲೂ ಅಜ್ಞಾನಿ ಅನುಭವಿ ಮೇಲು. ಅನುಭವ ಬೇಕು. ಕಾರಣ interview ಗಳಲ್ಲಿ ಪರಿಗಣನೆಗೆ ಬರೋದೆ ನಿಮ್ಮ experience. ಒಂದೇ ಕೆಲಸವನ್ನು ಪದೇ ಪದೇ ಮಾಡುವುದರಿಂದ ಹೊಸ ಅನುಭವಗಳು ಸಿಗುವುದಿಲ್ಲವಾದ ಕಾರಣ ಪದೇ ಪದೇ ಕೆಲಸ ಬದಲಾಯಿಸಬೇಕು ಗೆದ್ದರೆ ವೈಭವ, ಸೋತರೆ ಅನುಭವ ಬೇರೆಯವರ ಅನುಭವಗಳನ್ನು ಕೇಳಿಸಿಕೊಳ್ಳೋದೂ ಒಂದು ಅನುಭವವೇ ಅನನುಭವೀ ಡಾಕ್ಟರ್‌ಗಿಂತ ಅನುಭವೀ ರೋಗಿ ಶ್ರೇಷ್ಟ ವಯಸ್ಸಾದಂತೆ ಅನುಭವವಾಗುತ್ತದೆಂಬುದು ಖರೆ. ಆದರೆ ವಯಸ್ಸಾಗಿದೆಯೆಂಬ ಅನುಭವವೇ ಆಗದಿದ್ದವರಿಗೆ..? ವಯಸ್ಸಿಗೂ ಅನುಭವಕ್ಕೂ ಕೆಲವೊಮ್ಮೆ ಸಂಬಂಧ ಇಲ್ಲ, ಸಾವಿನ ಅನುಭವ ಯಾರಿಗೆ ಯಾವ ವಯಸ್ಸಿನಲ್ಲೂ ಆಗಬಹುದು ಕೆಲವಷ್ಟು ಅನುಭವಗಳನ್ನು ಕಾನೂನು ರೀತ್ಯಾ ಪಡೆಯಲು 18 ವರ್ಷವನ್ನು ಪೂರೈಸಲೇ ಬೇಕಾಗುತ್ತದೆ ಎಲ್ಲವನ್ನೂ ಅನುಭವಿಸಬೇಕೆಂಬ ಆಸೆ ಕಡಿಮೆಯಾಗುತ್ತಿದೆಯೆಂದರೆ ವೃದ್ಧಾಪ್ಯ ಆವರಿಸಿಕೊಳ್ಳುತ್ತಿದೆ ಎಂದರ್ಥ.ವಿಶ್ವನಾಥ ಸುಂಕಸಾಳ.Follow KannadaPrabha channel on WhatsApp Subscribe to KannadaPrabha YouTube Channel and watch Videos Download the KannadaPrabha News app to follow the latest news updates Subscribe and Receive exclusive content and updates on your favorite topics