ಬೇರೆಯವರ ಎಲ್ಲ ಅನುಭವಗಳೂ ನಮಗೆ ಪಾಠ ಕಲಿಸುವುದಿಲ್ಲ. ಹಾಗಿದ್ದಿದ್ದರೆ ಯಾರು ತಾನೆ ಮದುವೆಯಾಗುತ್ತಿದ್ದರು
ಜೀವನ ಪ್ರೀತಿಯಿರುವವನಿಗೆ ಯಾವ ಅನುಭವವವೂ ವ್ಯರ್ಥವಲ್ಲ
ಜೀವನಾನುಭವ ಪರಿಪೂರ್ಣವಾದವ ವನ ಜೀವನಕ್ಕೆ ತುಡಿಯುತ್ತಾನೆ
ಈ ಜನ್ಮದಲ್ಲಿ ಕಲಿತದ್ದು ಯಾವುದೂ ಮುಂದಿನ ಜನ್ಮದಲ್ಲಿ ಉಪಯೋಗಕ್ಕೆ ಬಾರದು. ಮತ್ತೆ ಒಂದನೇ ತರಗತಿಯಿಂದಲೇ ಕಲಿಯಬೇಕು
ಅನುಭವಗಳೆಲ್ಲ ವೈಯಕ್ತಿಕ ಮತ್ತು ಸ್ವಂತದ್ದು. ಚಡ್ಡಿಯಲ್ಲಿ ಉಚ್ಚೆ ಹೊಯ್ದುಕೊಂಡಾಗ ಆಗುವ ಬೆಚ್ಚಗಿನ ಅನುಭವ ಅವನಿಗೆ ಮಾತ್ರ
ನಿವೃತ್ತಿಯವರೆಗಿನ ಅಷ್ಟು ವರ್ಷದ ಅನುಭವ ನಿವೃತ್ತಿಯ ನಂತರ ನಿಮ್ಮ ಆದಾಯದಲ್ಲಿ ಯಾವ ವ್ಯತ್ಯಾಸವನ್ನೂ ಉಂಟುಮಾಡದು
ಅನುಭವಗಳನ್ನು ಎಷ್ಟು ಗಳಿಸಿದ್ದೀರಿ ಎಂಬುದಕ್ಕಿಂತ ಗಳಿಸಿದ್ದನ್ನು ಎಷ್ಟು ಬಳಸಿದ್ದೀರಿ ಎಂಬುದು ಮುಖ್ಯ
ಅನುಭವದಿಂದ ಭಡ್ತಿ ದೊರೆಯುತ್ತದೆ. ಉದ್ಯೋಗದಲ್ಲೂ, ಸಮಾಜದಲ್ಲೂ.
ಪೂರ್ಣ ಮನಸ್ಸಿನ ಕೆಲಸ ಮಾತ್ರ ಪೂರ್ಣ ಅನುಭವ ನೀಡುತ್ತದೆ
ಅನನುಭವವೇ ಅನುಭವ ಗಳಿಸಲು ಇರುವ ಅರ್ಹತೆ
ಅನುಭವಗಳೆಲ್ಲ ಒಳ ಉಡುಪಿನಂತೆ. ತೋರಿಸಲಾಗದು, ನಮ್ಮ ಜೊತೆಗೇ ಇದ್ದರೂ..
ಹೆಚ್ಚು ಅನುಭವಸ್ಥರಾದಂತೆಲ್ಲ ಹೊಸ ಅನುಭವಗಳು ಕಡಿಮೆಯಾಗುತ್ತಾ ಹೋಗುತ್ತವೆ
ಈ ಭವ ಸಾಕಪ್ಪಾ ಸಾಕು ಎಂಬ ಅನುಭವವಾಗದೇ ಇದ್ದರೆ ನಿಮಗಿನ್ನೂ ಜೀವನಾನುಭವ ಸರಿಯಾಗಿ ಆಗಿಲ್ಲವೆಂದರ್ಥ
ವಿಶ್ವನಾಥ ಸುಂಕಸಾಳ