ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ಕೋಟಿ ರೂಪಾಯಿ ಅಂತಾರೆ. ವ್ಯಂಗ್ಯವಿಲ್ಲದೇ ಉತ್ತರಿಸಿ.
ಕಡಸೂರು ಶಂಕರನಾರಾಯಣ, ಮೈಸೂರು
ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ಕೋಟಿ ರೂಪಾಯಿ ಅಂತಾರೆ. ವ್ಯಂಗ್ಯವಿಲ್ಲದೇ ಉತ್ತರಿಸಿ.
ಹೊರಗೆ ಹೋದರೆ ಖರ್ಚು ಮಾಡುತ್ತಾಳೆ ಅಂತ.
ನೇರಲಗುಡ್ಡ ಶಿವಕುಮಾರ, ಶಿರಾ, 9480343742
ಕನಿಷ್ಠ ಸುಖಕ್ಕಾಗಿ ಗರಿಷ್ಠ ಕಷ್ಟವನ್ನು ಒಪ್ಪಿಕೊಳ್ಳುವುದೇ ಮದುವೆಯಂತೆ! ನಿಜವೇ?
ಇದು ನಿಮ್ಮ ಅನುಭವವಾಗಿದ್ದರೆ ನಿಮ್ಮ ಬಗ್ಗೆ ನನಗೆ ಅನುಕಂಪವಿದೆ.
ವಿ. ಹೇಮಂತಕುಮಾರ, ಬೆಂಗಳೂರು, 9035992900
ಇಂಗ್ಲಿಷ್ ಅರ್ಥವಾಗದಿದ್ದರೂ ಕೆಲವರು ಇಂಗ್ಲಿಷ್ ಸಿನಿಮಾವನ್ನೇ ನೋಡ್ತಾರೆ ಏಕೆ?
ಅರ್ಥವಾದರೆ ಚೆನ್ನಾಗಿಲ್ಲ ಅನ್ನಿಸಿಬಿಡುವುದರಿಂದ.
ಉಜ್ಜನಿ ಜಲೇಂದ್ರ, ಮಲ್ಲುಗೆರೆ, 8971857200
ನನಗೆ ಊಟವಾದ ಮೇಲೆ ಹಸಿವಾಗಲ್ಲ, ರಾತ್ರಿ ಮಲಗಿ ಬೆಳಿಗ್ಗೆ ಎದ್ದ ಮೇಲೆ ನಿದ್ರೇನೂ ಬರಲ್ಲ. ಏನು ಮಾಡಲಿ?
ನನಗೆ ಊಟವಾದ ಕೂಡಲೆ ಹೊಟ್ಟೆ ತುಂಬಿ ಬಿಡುತ್ತೆ, ಮಲಗಿದ ಕೂಡಲೆ ನಿದ್ರೆ ಬಂದುಬಿಡುತ್ತೆ. ಇದಕ್ಕೇನಾದ್ರೂ ಪರಿಹಾರ ಇದ್ರೆ ನೀನೇ ಹೇಳು ಮಾರಾಯಾ.
ಹರಳಹಳ್ಳಿ ಪುಟ್ಟರಾಜು, ಪಾಂಡವಪುರ, 9632838088
ಗಂಡ ಹೆಂಡತಿಯ ಲೆಕ್ಕಾಚಾರದಲ್ಲಿ ಕೂಡಿಸಿ ಕಳೆದು, ಗುಣಿಸಿ, ಭಾಗಿಸಿದರೆ ಬರುವ ಉತ್ತರ?
ಮಕ್ಕಳು!
ಬಾಣಭಟ್ಟ