ಪತ್ನಿ ಮುನಿಸಿಗೂ ಪ್ರೇಯಸಿಯ ಮುನಿಸಿಗೂ ವ್ಯತ್ಯಾಸವೇನು?
ವಿ. ಹೇಮಂತಕುಮಾರ, ಬೆಂಗಳೂರು, 9035992900
ಪತ್ನಿ ಮುನಿಸಿಗೂ ಪ್ರೇಯಸಿಯ ಮುನಿಸಿಗೂ ವ್ಯತ್ಯಾಸವೇನು?
ನಮ್ಮದೇ ಬೈಕ್ ಹಾಳಾಗುವುದಕ್ಕೂ, ನಾವು ಹೋಗುತ್ತಿರುವ ಬಸ್ ಹಾಳುಗುವುದಕ್ಕೂ ಇರುವಷ್ಟೇ ವ್ಯತ್ಯಾಸ!
ಕಾಳಿಹುಂಡಿ ಶಿವಕುಮಾರ್ 9844883581
ದೇವಾಲಯಗಳಲ್ಲಿ ನೇರದರ್ಶನ ಇರುವ ಹಾಗೆ ಪ್ರೀತಿಗೂ ಇಲ್ಲವೇ?
ಹಾಗಾಗಿಬಿಟ್ಟರೆ ಪ್ರೀತಿ ಕೂಡ ವಿಐಪಿಗಳಿಗೆ ಮಾತ್ರ ದಕ್ಕುವಂತಾಗುತ್ತದೆ.
ಹರಳಹಳ್ಳಿ ಪುಟ್ಟರಾಜು, ಪಾಂಡವಪುರ, 9632838088
ಪ್ರೀತಿಗೆ ಕಣ್ಣಿಲ್ಲ ಅಂತ ಹೇಳ್ತಾರಲ್ಲ ಏಕೆ?
ಪ್ರೀತಿ ಕುರುಡು ಅಂತ ಇನ್ನೊಬ್ಬರು ಹೇಳಿರುವುದರಿಂದ!
ಲಕ್ಷ್ಮೀ ಬರ್ಕ್‌ಲಿರಮೇಶ್, 9538786547
ಮತದಾರ ಪ್ರಭು ಬುದ್ಧಿವಂತನಾಗುವುದು ಯಾವಾಗ?
ಬುದ್ಧಿವಂತನಾಗದಿದ್ದರೆ ಉಳಿಗಾಲವೇ ಇಲ್ಲ ಎಂದು ಮನದಟ್ಟಾದಾಗ.
ಶ್ರೀಧರ್ ಡಿ. ರಾಮಚಂದ್ರಪ್ಪ, ತುರುವನೂರು, ಚಿತ್ರದುರ್ಗ
ಜೀವನ ಮತ್ತು ಹವ್ಯಾಸಗಳ ಬಗ್ಗೆ ಸಲಹೆ ನೀಡಿ ಸಾರ್.
ಕೆಲವರಿಗೆ ಹವ್ಯಾಸವೇ ಜೀವನ. ಇನ್ನು ಕೆಲವರಿಗೆ ಜೀವನವೇ ಹವ್ಯಾಸ.
- ಬಾಣಭಟ್ಟ