ಗಟ್ಟಿ ನೆಲೆ ಕಂಡುಕೊಳ್ಳಲು ಅಗತ್ಯವಿರುವ ಗಟ್ಟಿ ಅಂಶ
ನಿಮ್ಮ ಮುನ್ನೆಲೆಯನ್ನು ಪ್ರಭಾವಿಸುವಂಥದ್ದು
ಚುನಾವಣೆಗೆ ಟಿಕೇಟ್ ನೀಡುವಾಗ ಮೊದಮೊದಲು ಉತ್ತಮ ಹಿನ್ನೆಲೆಯನ್ನು ನೋಡಿ ಕೊಡಲಾಗುತ್ತಿತ್ತು
ರೌಡಿಸಂ ಹಿನ್ನೆಲೆಯವರಾದರೆ ರಾಜಕಾರಣದಲ್ಲಿ ಬಲು ಬೇಗ ಮೇಲಕ್ಕೇರಬಹುದು
ಈ ಬ್ಯಾಕ್‌ಗ್ರೌಂಡ್ ಎನ್ನುವುದು ಚೆನ್ನಾಗಿದ್ದರೆ ಗ್ರೌಂಡ್‌ಲೆವೆಲ್‌ನಿಂದಲೇ ಚಿಮ್ಮಬಹುದು
ಕೆಲವೊಮ್ಮೆ ಹಿನ್ನೆಲೆ ಮುಖ್ಯವಾಗುವುದಿಲ್ಲ. ಈಗ ನಿಂತ ನೆಲೆಯೇ ಮುಖ್ಯ
ಕೆಲವರು ಯಾವತ್ತೂ ಹಿನ್ನೆಲೆಯಲ್ಲೇ ಇರುತ್ತಾರೆ. ಗಾಯಕರು, ಸಂಗೀತಗಾರರು, ಕಂಠದಾನ ಕಲಾವಿದರು..
ಸಿರಿತನದ ಹಿನ್ನೆಲೆಯಲ್ಲಿ ಬಂದವನಿಗೆ ಬಡತನದ ಹಿನ್ನೆಲೆಯವನಿಗಿಂತ ಅನುಭವ ಕಡಿಮೆ
ಮದುವೆಯ ಸಂದರ್ಭದಲ್ಲಿ ಚರ್ಚೆಗೆ ಬರುವ ಪ್ರಧಾನ ವಿಷಯವಿದು
ಕೆಲವೊಮ್ಮೆ ಪ್ರಬಲ ಹಿನ್ನಡೆ ಅನುಭವಿಸಲು ದುರ್ಬಲ ಹಿನ್ನೆಲೆಯೂ ಕಾರಣ
ಹಿನ್ನೆಲೆ ಮನೆಯ ಅಡಿಪಾಯದಂತೆ. ಗಟ್ಟಿಯಿದ್ದರೆ ಮಹಾಸೌಧ ಕಟ್ಟಬಹುದು, ಅನ್ಯಥಾ, ಸೌಧ ಉದುರಿಬೀಳುತ್ತೆ!
-ವಿಶ್ವನಾಥ ಸುಂಕಸಾಳ