ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ಕೆಲವು ನಟಿಯರು ತಮ್ಮ ವಯಸ್ಸನ್ನು ಇರುವುದಕ್ಕಿಂತ ಕಡಿಮೆ ಹೇಳ್ತಾರಂತಲ್ಲ?

Mainashree
Updated On : 18 Jun 2013, 10:06 am

ಓಂ ಚೆನ್ನೇಶ್ ಅರಬಿಳಚಿ ಕ್ಯಾಂಪ್, 9901257131
ಕೆಲವು ನಟಿಯರು ತಮ್ಮ ವಯಸ್ಸನ್ನು ಇರುವುದಕ್ಕಿಂತ ಕಡಿಮೆ ಹೇಳ್ತಾರಂತಲ್ಲ?
ನಿಜ. ಕೆಲ ನಟಿಯರಿಗೆ ಕೆಲವೊಂದನ್ನು ಇರುವುದಕ್ಕಿಂತ ಕಡಿಮೆ ಹಾಗೂ ಇನ್ನು ಕೆಲವನ್ನು ಇರುವುದಕ್ಕಿಂತ ಹೆಚ್ಚು ತೋರಿಸಿಕೊಳ್ಳಬೇಕಾಗುತ್ತದೆ!

ಹರಳಹಳ್ಳಿ ಪುಟ್ಟರಾಜು, ಪಾಂಡವಪುರ,  9632838088
ಹೆಣ್ಣಿನ ಮನಸ್ಸು ಹೆಣ್ಣಿಗೇ ಅರ್ಥವಾಗೋದು ಬಿಡಿ ಅನ್ನುವುದೇಕೆ?
ಗಂಡಸರಿಗೆ ಅರ್ಥವಾಗದೇ ಇರುವುದರಿಂದ.

ವಿ. ಹೇಮಂತಕುಮಾರ, ಬೆಂಗಳೂರು, 9035992900
ಇಲಿ ಇರುವ ಜಾಗ ಬೆಕ್ಕಿಗೆ ತಾನೆ ಗೊತ್ತಿರುತ್ತೆ?
ಹಾಗೇ ಬೆಕ್ಕು ಇರುವ ಜಾಗ ಇಲಿಗೂ ಗೊತ್ತಿರುತ್ತೆ!

ಮುಗ್ಗಳ್ಳಿ ಗುರು, ಬನವಾಸಿ 9480931442
ಪ್ರೀತಿ ಮೊದಲು ಹೆಣ್ಣನಲ್ಲಿ ಉದ್ಭವಿಸುತ್ತದೆಯೇ ಅಥವಾ ಗಂಡಿನಲ್ಲಿ ಹುಟ್ಟುತ್ತದೆಯೇ?
ಪ್ರೀತಿಯ ಫಲವಾಗಿ ಹುಟ್ಟುವುದಕ್ಕೆ ಇಬ್ಬರೂ ಕಾರಣರಾಗಿರುತ್ತಾರೆ ಎಂಬುದನ್ನು ಮಾತ್ರ ಖಾತ್ರಿಯಾಗಿ ಹೇಳಬಹುದು!

ಕಂಡಕ್ಟರ್ ರಾಜು, 9844777110
ಬಸ್‌ಸ್ಟ್ಯಾಂಡ್‌ನಲ್ಲಿ ನಿಂತ ಹುಡುಗಿ ತನ್ನ ಬಾಯ್‌ಫ್ರೆಂಡ್ ಬೈಕಿಗೆ ಕಾಯ್ತಾಳಲ್ಲ?
ಇರ್ಲಿ ಬಿಡಿ, ಎಲ್ಲ ಹುಡುಗಿಯರೂ ನಿಮ್ಮದೇ ಬಸ್ ಹತ್ತಲಿ ಅನ್ನೋ ಅತಿ ಆಸೆ ಏಕೆ?

 ಬಾಣಭಟ್ಟ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement