ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ವಾಟಾಳರ ಕಪ್ಪುಗಾಜನ್ನೂ ತೆಗೆಯುವಂತೆ ಆದೇಶಿಸಿದ್ರೆ?

Mainashree
Updated On : 19 Jun 2013, 10:41 am

ಫ್ಯಾಷನ್ ಡಿಸೈನರ್ ಮಧು 9945737427
ಐಸ್‌ಕ್ರೀಂನ ಸುಲಭವಾಗಿ ತಿನ್ನಬಹುದು. ಆದರೆ ಪಾನಿಪೂರಿ-ನೂಡಲ್ಸ್ ತಿನ್ನುವುದಕ್ಕೆ ಸರ್ಕಸ್ ಮಾಡಬೇಕಲ್ಲಾ?
ಜೀವನದಲ್ಲಿ ಎಲ್ಲವೂ ಸುಲಭಕ್ಕೆ ಸಿಗೋಲ್ಲ ಎಂಬ ಮಾತು ಚಾಲ್ತಿಗೆ ಬಂದಿದ್ದು ಇನ್ಯಾಕೆ?

ಪಿ. ಜೆ. ರಾಘವೇಂದ್ರ, ಮೈಸೂರು
ವಾಟಾಳರ ಕಪ್ಪುಗಾಜನ್ನೂ ತೆಗೆಯುವಂತೆ ಆದೇಶಿಸಿದ್ರೆ?
ಸಾಧ್ಯವೇ ಇಲ್ಲ. ಕಪ್ಪು ಪ್ರತಿಭಟನೆ ಸಂಕೇತ ಮತ್ತು ಪ್ರತಿಭಟನೆ ವಾಟಾಳರ ಹಕ್ಕು!

ಎಸ್. ಎ. ಭಟ್, ಕುಮಟಾ
ಎಲ್ಲ ಟಿವಿ ಚಾನೆಲ್‌ನವರೂ ಏಕಕಾಲಕ್ಕೆ ಎಡ್ವರ್‌ಟೈಸ್‌ಮೆಂಟ್ ಹಾಕೋದೇನಕ್ಕೆ?
ಆಗಲಾದರೂ ಬೇರೆ ಕೆಲಸ ಮಾಡಿಕೊಳ್ಳಿ ಅಂತ!

ಸಿ.ಎಸ್. ಅನುಪಮ, ಮೈಸೂರು
ಅಳಿಯ ಮನೆ ತೊಳೆಯಲು ಕಾರಣ?
ಮದುವೆಯಾಗುತ್ತಿದ್ದಂತೆ ತೊಳೆಯುವ-ಗುಡಿಸುವ ಕೆಲಸಗಳಿಂದ ಮಗಳು ನಿವೃತ್ತಳಾದದ್ದು!

ಗಿರೀಶ, ಯಾದಗಿರಿ 9482255321
ನಂಗೆ ಪ್ರೀತಿ-ಪ್ರೇಮ ಹುಡುಕಿಕೊಡ್ತೀರಾ?
ಹುಡುಕೋಣವಂತೆ, ಆದರೆ ಕೊಡುವ ಕೆಲಸ ಮಾತ್ರ ದುಬಾರಿಯಾಯ್ತು!

 ಬಾಣಭಟ್ಟ


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement