'ಆಷಾಢದಲ್ಲಿ' ಅಳಿಯ ಯಾಕೆ ಅತ್ತೆ ಮನೆಗೆ ಹೋಗಬಾರದು?
ಓಂ. ಚನ್ನೇಶ್ ಅರಬಿಳಚಿ ಕ್ಯಾಂಪ್, ಭದ್ರಾವತಿ, 9901257131
'ಆಷಾಢದಲ್ಲಿ' ಅಳಿಯ ಯಾಕೆ ಅತ್ತೆ ಮನೆಗೆ ಹೋಗಬಾರದು?
ಅದೊಂದು ತಿಂಗಳಾದ್ರೂ ತನ್ನ ಮನೇಲಿ ಇರಲಿ ಅಂತ!
ವಿ. ಹೇಮಂತಕುಮಾರ್, ಬೆಂಗಳೂರು, 9035992900
ಭಗ್ನಪ್ರೇಮಿಗೂ ಲಗ್ನಪ್ರೇಮಿಗೂ ವ್ಯತ್ಯಾಸವೇನು?
ಭಗ್ನಪ್ರೇಮಿ ಹಳ್ಳಕ್ಕೆ ಬೀಳಬಹುದು, ಲಗ್ನಪ್ರೇಮಿ ಪಾತಾಳಕ್ಕೆ ಬೀಳಬಹುದು!
ಹರಳಹಳ್ಳಿ ಪುಟ್ಟರಾಜು, ಪಾಂಡವಪುರ, 9632838088
ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ಕೋಟಿ ರುಪಾಯಿ. ಇಬ್ಬರಿದ್ದರೆ?
ಇಬ್ಬರಿದ್ದರೆ ನೀವು ಮನೆ ಹೊರಗಿರ್ತೀರಿ!
ಫ್ಯಾಷನ್ ಡಿಸೈನರ್ ಮಧು, 9945737427
ಟೆನಿಸ್ ಆಡುವ ಚೆಲುವೆಯರಿಗೆ ದೇಹದ 'ಅಂಕು-ಡೊಂಕು' ಪ್ರದರ್ಶಿಸುವ 'ಶಾರ್ಟ್ ಸ್ಕರ್ಟ್' ಅಗತ್ಯವಾ?
ಅದರ ಹೆಸರೇ 'ಓಪನ್ ಟೆನಿಸ್' ಅಲ್ವಾ?
ನನ್ನದೆಲ್ಲಾ ನಿನ್ನದು, ನಿನ್ನದೆಲ್ಲಾ ನನ್ನದು ಅಂತ ಮೆಸೇಜು ಕಳುಹಿಸಿರುವ ಚೆಲುವೆಗೆ ಏನೆಂದು ಉತ್ತರಿಸಲಿ?
ನಿಮ್ಮ ಸಾಲದ ಬಗ್ಗೆ ಹೇಳಿ!
ಬಾಣಭಟ್ಟ