ಬಾತ್ಮೀದಾರ
ಕೇಳುವುದಕ್ಕೂ ಹೇಳುವುದಕ್ಕೂ ಇರುವ ಮಾಧ್ಯಮ
ಚಾಡಿಕೋರ, ಪಿಶುನಕ
ನಾನು ಕೊಂಡ ಮೊಬೈಲೇ ಶ್ರೇಷ್ಠ ಮತ್ತು ಇಷ್ಟ
ಸ್ಪರ್ಶ ಸಂವೇದಿ ಮೊಬೈಲನ್ನು 'ಮುಟ್ಟಿದರೆ ಮುನಿ' ಎನ್ನಬಹುದು
ಬಾಲಕರಿಂದ ಮುದುಕರವರೆಗೆ ಎಲ್ಲರೂ ಮೊಬೈಲ್ ವೀರರೇ
ದೇವತೆಗಳ ಪಾಲಿಗೂ ಇದರ ಭಾಗ್ಯ
ರಿಂಗ್ ರಿಂಗ್ ರಿಂಗಾ ರಿಂಗಾ ರಿಂಗ್...
ಬೋರ್ ಹೊಡೆಸುವ ಭಾಷಣಕಾರರಿಂದ ತಪ್ಪಿಸಿಕೊಂಡು ಸಭಾತ್ಯಾಗ ಮಾಡಲೊಂದು ಅತ್ಯುತ್ತಮ ನೆಪ
ಏಕಾಂತ ಮತ್ತು ಕಾಂತಾ ಇಬ್ಬರನ್ನೂ ದೂರವಾಗಿಸುವ ಶತ್ರು
ಬಯಲು ಮೊಬೈಲೊಳಗೆ ಬಯಲೋ
ಇದರ ಮೂಲಕ ಆಡುವ ಪ್ರತಿ ಮಾತೂ 'ಬೆಲೆ' ಬಾಳುವಂಥದ್ದು
ಆಡಿದುಣ್ಣೋ ಮಹರಾಯ
ನಿಮಗಿದು ಅವಶ್ಯ ಎನಿಸದಿದ್ರೂಇದು ನಿಮ್ಮ ಅವಶ್ಯಕತೆಯೇ
ವಿಶ್ವನಾಥ ಸುಂಕಸಾಳ