ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ತುಂಬು ಯೌವ್ವನದಿಂದ ತುಳುಕುತ್ತಿರುವ ಹುಡುಗ ಹುಡುಗಿಯರಿಗೆ ನಿಮ್ಮ ಕಿವಿಮಾತೇನು?

Mainashree
Updated On : 22 Jun 2013, 12:06 pm

ಎಂ.ಜಿ. ಶಿವರಾಂ, ಜೆ.ಪಿ. ನಗರ, ಬೆಂಗಳೂರು
ಜೈಪುರದ ಯಾವ ಜೆಮ್ ಧರಿಸಿದರೆ ಅಗತ್ಯವಸ್ತುಗಳಾದ ಅಕ್ಕಿ. ತೊಗರಿಬೇಳೆ, ಹಣ್ಣು, ತರಕಾರಿ, ಎಣ್ಣೆ ಇತ್ಯಾದಿ ಪದಾರ್ಥಗಳು ಕಡಿಮೆ ಬೆಲೆಗೆ ಸಿಗುತ್ತವೆ?
ಬೆಲೆ ಕೇಳಿದಾಕ್ಷಣ ಮೈ ಜುಂ ಗುಡುವುದನ್ನು ತಡೆಯುವ ಜೆಮ್ ಇನ್ನೂ ಮಾರುಕಟ್ಟೆಗೆ ಬಂದಿಲ್ಲ.

ಹರಳಹಳ್ಳಿ ಪುಟ್ಟರಾಜು, ಪಾಂಡವಪುರ, 9632838088
ತುಂಬು ಯೌವ್ವನದಿಂದ ತುಳುಕುತ್ತಿರುವ ಹುಡುಗ ಹುಡುಗಿಯರಿಗೆ ನಿಮ್ಮ ಕಿವಿಮಾತೇನು?
ಜಾಸ್ತಿ ತುಳುಕಿಸಬೇಡಿ!

ಫ್ಯಾಷನ್ ಡಿಸೈನರ್ ಮಧು, 9945737427
ಪ್ರೀತಿಯ ಆರಂಭದಲ್ಲೇ ಆಲಿಂಗನ- ಸಿಹಿ ಚುಂಬನ ಬೇಡ ಅಂದ್ರೆ, ಆ ಚಲುವೆ ಹೀಗೂ ಉಂಟೇ ಅಂತಾಳಲ್ಲ?
ನಿನ್ನ ಮೇಲೆ ಅನುಮಾನ ಬಂದೀತು ಹುಶಾರು.

ಚಿರಪ್ರಭ, ನಂಜನಗೂಡು, 8553793107
ಕೋಲ್ಗೇಟ್‌ಗೂ, ಕೋಲ್-ಗೇಟ್‌ಗೂ ಏನು ವ್ಯತ್ಯಾಸ?
ಒಂದರಿಂದ ಹಲ್ಲು ಬಿಳಿಯಾಗುತ್ತೆ. ಇನ್ನೊಂದರಿಂದ ಮುಖವೆಲ್ಲ ಕಪ್ಪಾಗುತ್ತೆ.

ಓ. ಚನ್ನೇಶ್ ಅರಬಿಳಚಿಕ್ಯಾಂಪ್, ಭದ್ರಾವತಿ, 9900739725
ನಾಯಿ ತನ್ನ ಯಜಮಾನನನ್ನು ಕಂಡ ಕೂಡಲೇ ಬಾಲ ಅಲ್ಲಾಡಿಸುತ್ತಲ್ಲ ಯಾಕೆ?
ಬಾಲ ಅಲ್ಲಾಡಿಸೋರು ಅಂದರೆ ಎಲ್ಲ ಯಜಮಾನರಿಗೂ ಇಷ್ಟ.

- ಬಾಣಭಟ್ಟ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement