Maleವರ್ಗ- ಪುರುಷ ಜಾತಿ
ಯಾವತ್ತೂ ವಾಯುಯಾನದಲ್ಲೇ ಮೇಲಿಂದ ಸಂಚರಿಸುವ ವರ್ಗ
ದೇವಾನುದೇವತೆಗಳೆಲ್ಲ ಮನುಷ್ಯರಿಗಿಂತ ಮೇಲ್ವರ್ಗದವರೇ
ನಮ್ಮ ಮೇಲೆ ಅಧಿಕಾರ ಚಲಾಯಿಸುವ ಮೇಲಧಿಕಾರಿ ವರ್ಗ
ಬಾಸ್ ಮನೆತನ
ಗ್ರೌಂಡ್ ಫ್ಲೋರ್‌ಗಿಂತ ಮೇಲೆ ವಾಸಿಸುವ ಜನ
ಮೇಲಿಂದ ಮೇಲೆ ಮೈಮೇಲೆ ಹಾರಿ ಬೀಳುವ ಸಿಡುಕಿನ ಸ್ವಭಾವದವರು
ವೃಕ್ಷವಾಸಿಗಳು, ಶಾಖಾಮೃಗಗಳು
ಮೀಸಲಾತಿಯೆಂಬ ಸೌಲಭ್ಯವಿಲ್ಲದ ಶಾಪಗ್ರಸ್ತರು
ತಾವು ಕೆಳವರ್ಗದವರೆಂದು ಅಂದುಕೊಳ್ಳುವವರಿರುವ ತನಕ ಇವರಿರುತ್ತಾರೆ
ತಾವು ಮೇಲೆ ಬರಲು ಸ್ವಂತ ಬಲವನ್ನೇ ಆಶ್ರಯಿಸಬೇಕಾದ ಜರೂರತ್ತು ಇವರದ್ದು
ಇವರನ್ನು ಕೆಳ ಜಗ್ಗಿ ಉಳಿದವರಿಗೆ ಸರಿಯಾಗಿಸುವುದೇ ಸಮಾನತಾ ಸಿದ್ಧಾಂತ
ಲದ್ಧಿಜೀವಿಗಳ 'ಕೆಂಪು' ಗಣ್ಣಿಗೆ ಗುರಿಯಾದವರು
ಇವರನ್ನು ದೂಷಿಸುವ ಮೂಲಕ ಅನಾಯಾಸವಾಗಿ ಸಮಾನತಾವಾದಿ, ವಿಚಾರವಾದಿ, ಜಾತ್ಯತೀತ ಮೊದಲಾದ ಪಟ್ಟವನ್ನು ಗಳಿಸಬಹುದು
ವಿಶ್ವನಾಥ ಸುಂಕಸಾಳ