ಮೀನನ್ನು ಪಡೆಯಲು ಬಲೆ ಬೀಸಬೇಕು. ಹೆಣ್ಣನ್ನು ಪಡೆಯಲು?
ವಿ. ಹೇಮಂತಕುಮಾರ, ಬೆಂಗಳೂರು, 9035992900
ಮೀನನ್ನು ಪಡೆಯಲು ಬಲೆ ಬೀಸಬೇಕು. ಹೆಣ್ಣನ್ನು ಪಡೆಯಲು?
ಬಲೆಗೆ ಬಿದ್ದ ಮೀನಾಗಬೇಕು.
ಸರಸ್ವತಿ ರಮೇಶ್, ಹನುಮನಾಳು
ಪ್ರೀತಿ ಇದೆಯಾ ಇಲ್ಲವಾ ಎಂದು ತಿಳಿಯಲು ಸ್ಕ್ಯಾನಿಂಗ್ ಮಾಡಿಸಿದರೆ ಎಂಗೆ ಎಂದು ಇಲ್ಲೊಬ್ಬಳು ಕೇಳುತ್ತಿದ್ದಾಳಲ್ಲ?
ಪ್ರೀತಿಯ ಪರಿಣಾಮ ಆಗಿದೆಯೋ ಇಲ್ಲವೋ ಎಂದು ತಿಳಿಯಲು ಮಾತ್ರ ಸ್ಕ್ಯಾನಿಂಗ್ ಮಾಡುತ್ತಾರೆ ಎಂತ ಹೇಳು ಅವಳಿಗೆ.
ಓಂಚನ್ನೇಶ್ ಅರಬಿಳಚಿಕ್ಯಾಂಪ್, ಭದ್ರಾವತಿ, 9900739725
ಹೆಂಡತಿಯನ್ನು ಬಟ್ಟೆ ಅಂಗಡಿಗೆ, ಆಭರಣಗಳ ಅಂಗಡಿಗೆ ಕರೆದುಕೊಂಡು ಹೋಗಬಾರದಂತೆ ಯಾಕೆ?
ಅದು ಗೊತ್ತಾಗಬೇಕಿದ್ದರೆ ಒಮ್ಮೆ ಕರೆದುಕೊಂಡು ಹೋಗಿ ನೋಡು.
ರಮೇಶ್ ಭಟ್, ಆವರ್ಸೆ, ಮೈಸೂರು, 9164276058
ಪೆಟ್ರೋಲ್ ಮತ್ತು ಯೌವ್ವನಕ್ಕಿರುವ ಭಿನ್ನತೆಯೇನು?
ಪೆಟ್ರೋಲು ದರ ಏರುತ್ತಿರುತ್ತೆ. ಯೌವ್ವನ ಇಳಿಯುತ್ತಿರುತ್ತೆ!
ಶಿಲ್ಪಿರಮೇಶ್, ಸಂತೇಮಾಳ, ಬನ್ನೂರು
ಇಲ್ಲೊಬ್ಬಳು ಪ್ರೀತಿ ಕೇಳಿ ಸ್ನೇಹ ಕಳೆದುಕೊಳ್ಳಬೇಡಿ ಅಂತ ನನ್ನ ಸ್ನೇಹಿತನಿಗೆ ಸಂದೇಶ ಕಳುಹಿಸಿದ್ದಾಳಲ್ಲ?
ಸ್ನೇಹಕ್ಕೋಸ್ಕರ ಪ್ರೀತಿ ಕಳೆದುಕೊಳ್ಳಬೇಡಿ ಅಂತ ರಿಪ್ಲೈ ಮಾಡಕ್ಕೇಳು.
ಬಾಣಭಟ್ಟ