ಸಂಪಾದಕೀಯ

ನಿರ್ದಯಿಯನ್ನೂ ಪಳಗಿಸಿದ ಮಹಾತ್ಮರು

ಮಹಾತ್ಮ ಗಾಂಧಿಯವರು ದಕ್ಷಿಣ ಆಫ್ರಿಕಾದಲ್ಲಿ ಇದ್ದಾಗಿನ ಒಂದು ಪ್ರಸಂಗ ಇದು. ಅಲ್ಲಿ ವರ್ಣದ್ವೇಷದ ರೂವಾರಿಗಳಾಗಿದ್ದ ಆಂಗ್ಲರ ದಬ್ಬಾಳಿಕೆ ಅಧಿಕವಾಗಿದ್ದರಿಂದ ಗಾಂಧೀಜಿಯವರು ಅದರ ವಿರುದ್ಧ ಹೋರಾಟವನ್ನೇ ಪ್ರಾರಂಭಿಸಿದರು. ಜನರಲ್ ಸ್ಮಟ್ಸ್ ಎಂಬ ಅಧಿಕಾರಿಯಂತೂ ಒಂದಿನಿತೂ ದಯೆ ಹೊಂದಿರದ ರಾಕ್ಷಸನೇ ಆಗಿದ್ದ. ಅನೇಕ ಮುಗ್ಧ ಜನರನ್ನು ಎತ್ತಿಕಟ್ಟಿ ಜನಾಂಗೀಯ ದ್ವೇಷ ಹೆಚ್ಚಲು ಕಾರಣೀಭೂತನಾಗಿದ್ದ. ಶಾಂತವಾಗಿ ಚಳವಳಿ ನಡೆಸುತ್ತಿದ್ದ ಸತ್ಯಾಗ್ರಹಿಗಳನ್ನು ಬಂಧಿಸಿ ಹಿಂಸಿಸುತ್ತಿದ್ದ. ಗಾಂಧೀಜಿಯವರೂ ಸಹ ಇವನ ದಬ್ಬಾಳಿಕೆಗೆ ಗುರಿಯಾಗಿ ಆಗಾಗ್ಗೆ ಜೈಲುವಾಸ ಅನುಭವಿಸಿದರು. ಇದು ಅವರ ಆತ್ಮ ಶಕ್ತಿಯನ್ನು ಹೆಚ್ಚಿಸಿತೇ ಹೊರತು ಕಡಿಮೆಮಾಡಲಿಲ್ಲ. ಅವರಿಗೆ ಜೈಲುವಾಸ ಆತ್ಮಶುದ್ಧಿಗೆ ದೊರೆಯುವ ಅವಕಾಶವಾಗಿತ್ತು. ಹೀಗೆಯೇ ಒಮ್ಮೆ ಜೈಲು ಶಿಕ್ಷೆ ಅನುಭವಿಸಿದಾಗ ಅವರು ಚರ್ಮಗಾರಿಕೆಯಲ್ಲಿ ಪರಿಣತಿ ಪಡೆದರು. ಚರ್ಮವನ್ನು ಹದಗೊಳಿಸುವುದು, ಅದರಿಂದ ಪಾದರಕ್ಷೆ ಮತ್ತಿತರ ವಸ್ತುಗಳನ್ನು ತಯಾರಿಸುವುದನ್ನು ಕಲಿತರು. ನಂತರ ಅತ್ಯಂತ ಆಸಕ್ತಿಯಿಂದ ಸೊಗಸಾದ ಒಂದು ಜೊತೆ ಪಾದರಕ್ಷೆಯನ್ನು ತಯಾರಿಸಿದರು. ಅದು ಎಲ್ಲ ರೀತಿಯಲ್ಲೂ ಪರಿಪೂರ್ಣವಾಗಿತ್ತು. ಆ ಜನರಲ್ ಒಂದು ದಿನ ಗಾಂಧೀಜಿಯವರ ಸೆಲ್ಲಿಗೆ ಬಂದು ಅವರನ್ನು ಸರ್ಕಾರ ಕ್ಷಮಿಸಿ ಬಿಡುಗಡೆಮಾಡಿದೆಯೆಂದು ತಿಳಿಸಿ ಅವರನ್ನು ಬಂಧಮುಕ್ತರನ್ನಾಗಿ ಮಾಡಿದ. ಗಾಂಧೀಜಿ ಕೃತಜ್ಞತಾಪೂರ್ವಕವಾಗಿ ತಾವು ತಯಾರಿಸಿದ ಪಾದರಕ್ಷೆಯನ್ನು ಸ್ಮಟ್ಸ್‌ನಿಗೆ ಅರ್ಪಿಸಿ ಹೊರನಡೆದರು. ಮುಂದೆ ಒಂದು ದಿನ ಗಾಂಧೀಜಿಯವರ ಜನ್ಮದಿನದಂದು ಜನರಲ್ ಸ್ಮಟ್ಸ್ ಪತ್ರವೊಂದನ್ನು ಬರೆದ....'ಮಾನ್ಯರೇ, ನೀವು ಅಂದು ನೀಡಿದ ಪಾದರಕ್ಷೆಯನ್ನು ಕೆಲಕಾಲ ಧರಿಸಿದ್ದೆ. ಆದರೆ ಯೋಚಿಸಿದಾಗ ನನಗನಿಸಿತು, ನಿಮ್ಮಂತಹ ಮಹಾತ್ಮರ ಜೋಡಿನಲ್ಲಿ ನಿಲ್ಲಲು ನಾನು ಅನರ್ಹನೆಂದು.'
 ಈ ಮಾತುಗಳು ಎಲ್ಲರಿಂದ ದುರುಳ, ಪಿಶಾಚಿ ಎಂದೆಲ್ಲಾ ನಿಂದನೆಗೆ ಗುರಿಯಾಗಿದ್ದ ಆಂಗ್ಲ ಅಧಿಕಾರಿಯದು. ಅಂತಹ ಅಧಿಕಾರಿಯೂ ಸಹ ಗಾಂಧೀಜಿಯವರ ಮಾನವಾಂತಃಕರುಣೆಯ ಫಲದಿಂದ ಒಳ್ಳೆಯ ಮನುಷ್ಯನಾಗಿ ಪರಿವರ್ತಿತನಾಗಿದ್ದ.

-ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
rajsundar1957@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ವಿಮಾನ ಹೈಜಾಕ್ ಬೆದರಿಕೆ ಎಚ್ಚರಿಕೆ: ಫ್ರಾಂಕ್‌ಫರ್ಟ್‌- ದೆಹಲಿ Air India ಜೈಪುರದಲ್ಲಿ ಎಮೆರ್ಜೆನ್ಸಿ ಲ್ಯಾಂಡಿಂಗ್

ಬಿಹಾರದ ವೈಶಾಲಿಯಲ್ಲಿ ದೋಣಿ ಮುಳುಗಿ ಕನಿಷ್ಠ 13 ಮಂದಿ ಸಾವು; ಪ್ರಧಾನಿ ಮೋದಿ ಸಂತಾಪ, ಪರಿಹಾರ ಘೋಷಣೆ; Video

ಬಿಹಾರದ ಯುವಕನ ಜೊತೆ ಪ್ರೀತಿ, ಮದುವೆಗೆ ಸಿದ್ಧತೆ; ತಾಯಿ ಸಲಹೆ ಬೆನ್ನಲ್ಲೇ ನಿರ್ಧಾರ ಬದಲಿಸಿದ ಬೆಂಗಳೂರು ಟೆಕ್ಕಿ.. ಆಗಿದ್ದೇನು?

'ಜಂತರ್ ಮಂತರ್‌'ಗೆ ಅಕ್ರಮ ಪ್ರವೇಶ ಆರೋಪ: ಮುನ್ನೆಚ್ಚರಿಕೆ ಕ್ರಮವಾಗಿ CJPಯ ರಂಕಾ, ದಾಸ್, ಶಿಂಧೆ ಬಂಧನ

‘ರಾಹುಲ್ ಗಾಂಧಿ ನನ್ನನ್ನು ಪಕ್ಕಕ್ಕೆ ತಳ್ಳಿಲ್ಲ,ಕಾಳಜಿ ವಹಿಸಿದರು, ಬಿಜೆಪಿಯವರಿಗೆ ನನ್ಮೇಲೆ ತುಂಬಾ ಪ್ರೀತಿ’: CM ಡಿ.ಕೆ. ಶಿವಕುಮಾರ್; Video