ಸಂಪಾದಕೀಯ

ಉದಾಸೀನ

ಕಡೆಯಲ್ಲಿ ಬಂದವರ ಬಗೆಗಿನ ಕಡೆಗಣನೆ
    ಅವಮಾನಿಸುವುದಕ್ಕೆಂದೇ ತೋರುವ ಅವಗಣನೆ
    ಕೋಟಿ ಇರುವಾಗ ಲಕ್ಷದ ಬಗೆಗಿನ ನಿರ್ಲಕ್ಷ್ಯ
    ಸಂಬಂಧಿಕರ ಬಗೆಗೆ ಸಂಬಂಧವಿಲ್ಲದಿರುವಂತೆ ಇರುವಿಕೆ
    ಸಾರವಿಲ್ಲವೆಂದು ಅರಿವಿಗೆ ಬಂದ ವಿಷಯದ ಮೇಲಿನ ತಾತ್ಸಾರ
    ಲಂಚ ಕೊಡಲು ಹಿಂಜರಿಯುವವನ ಮೇಲೆ ಲಂಚಿಗ ಬೀರುವ ದೃಷ್ಟಿ
    ಸಂಪತ್ತಿನ ಗರ್ವ ತಂದುಕೊಡುವ ಮನೋಭಾವ
    ಬೇರೆಯವರು ನಮ್ಮನ್ನು ಉದಾಸೀನ ಮಾಡಬಾರದೆಂಬ ಭಾವವೇ ನಮ್ಮನ್ನು ಕ್ರಿಯಾಶೀಲವಾಗಿಡುವುದು
    ಉನ್ಮತ್ತ, ಪಾನಮತ್ತ ಮತ್ತು ಗರ್ವಮತ್ತರ ಚಚಿತ್ತ ಇದರಿಂದಲೇ ತುಂಬಿರುವುದು
    'ಉದಾಸಿ'ಯವರ ಬಗೆಗಿನ ಸ್ವಪಕ್ಷದವರ ನಿಷ್ಕಾಳಜಿ
    ಕೈಗೆ ನಿಲುಕದೆಂದು ತಿಳಿದ ವಿಷಯದ ಬಗೆಗಿನ ತಾತ್ಕಾಲಿಕ ವೈರಾಗ್ಯ
    ಇದನ್ನು ಬೆಳೆಸಿಕೊಂಡರೆ ಅನಗತ್ಯ ತಲೆಬಿಸಿಗಳು ಕಡಿಮೆಯಾಗುತ್ತವೆ
    ವಿಸ್ಮೃತಿ ಮಾಲ; ಮರೆವಿನ ಚೀಲ
    ಹೊತ್ತು ಹೆತ್ತವರ ಬಗೆಗಿನ ಈಗಿನ ಮಕ್ಕಳ ಪ್ರತಿಕ್ರಿಯೆ
    ಎದುರಿಗಿರುವ ಅತ್ಯಂತ ಸುಂದರ ಹೆಣ್ಣನ್ನು ಯಾರಾದರೂ ಉಪೇಕ್ಷೆ ಮಾಡಿದರೆಂದರೆ ಪಕ್ಕದಲ್ಲೇ ಹೆಂಡತಿ ಇದ್ದಾಳೆಂದು ಊಹಿಸಬಹುದು
    ಉದಾಸೀನತೆಯ ವಿಷಯದಲ್ಲಿ ಭಾರತೀಯರು ಉದಾರಿಗಳು
    ಅಹಂಕಾರದ ಸದ್ದಿಗೆ ಉದಾಸೀನವೇ ಮದ್ದು

-ವಿಶ್ವನಾಥ ಸುಂಕಸಾಳ
vishwasunkasal@yahoo.com


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Delhi CJP Protest: ಅಭಿಜೀತ್ ದೀಪ್ಕೆ, ಸೌರವ್ ದಾಸ್, ಆಶುತೋಷ್ ರಂಕಾ,ಯೂಟ್ಯೂಬರ್ ಧ್ರುವ್ ರಾಠಿ ಸೇರಿ 200ಕ್ಕೂ ಹೆಚ್ಚು ಮಂದಿ ಪೊಲೀಸ್ ವಶಕ್ಕೆ; Video

CEC ಜ್ಞಾನೇಶ್ ಕುಮಾರ್ ವಜಾಕ್ಕೆ ಆಗ್ರಹಿಸಿ CJP ಪ್ರತಿಭಟನೆ: ದೆಹಲಿಯಲ್ಲಿ ಬಂಧನ ಪ್ರಕ್ರಿಯೆ ಆರಂಭ, ತೀವ್ರ ಭದ್ರತೆ; Video

‘ಕಾನೂನು ಸುವ್ಯವಸ್ಥೆಗೆ ಗಂಭೀರ ಅಪಾಯವಿದೆ’: ಸಿಜೆಪಿ ಪ್ರತಿಭಟನೆಗೆ ಕೆಲವೇ ಗಂಟೆ ಮೊದಲು ರಾಜ್ಯಗಳಿಗೆ ಪತ್ರ ಬರೆದು MHA ಹೇಳಿದ್ದೇನು?

ನವೆಂಬರ್‌ನಲ್ಲಿ ಕರ್ನಾಟಕ ಬಿಜೆಪಿಗೆ ಮೇಜರ್ ಸರ್ಜರಿ: ಬಿವೈ ವಿಜಯೇಂದ್ರ, ಆರ್ ಅಶೋಕಗೆ ಗೇಟ್ ಪಾಸ್?; ಹೊಸ ಮುಖಗಳಿಗೆ ಮಣೆ!

ಬಾಕಿ ಸಾಲ ವಸೂಲಿಗೆ 'ಗೃಹಲಕ್ಷ್ಮಿ' ಯೋಜನೆಯ ಹಣ ಕಡಿತಗೊಳಿಸದಂತೆ ಬ್ಯಾಂಕುಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ ಸರ್ಕಾರ!