ಕೆಲವರು ಮಲಗಿರುವಾಗಲೂ ಕನ್ನಡಕ ಧರಿಸುತ್ತಾರೆ ಏಕೆ?
ಕೆಲವರು ಮಲಗಿರುವಾಗಲೂ ಕನ್ನಡಕ ಧರಿಸುತ್ತಾರೆ ಏಕೆ?
ಕನಸು ಕ್ಲಿಯರ್ ಆಗಿ ಕಾಣಲಿ ಅಂತ!
ವಿ. ಹೇಮಂತಕುಮಾರ, ಬೆಂಗಳೂರು, 9035992900
ಎಲ್ಲಕ್ಕಿಂತ ಉತ್ತಮವಾದ ದಾನ ಯಾವುದು ಬಾಣಭಟ್ರೇ?
ಮೈದಾನ ಎಂಬುದು ಕಿಡಿಗೇಡಿಗಳ ವಾದ!
ರಮೇಶ ಭಟ್, ಆವರ್ಸೆ, ಮೈಸೂರು, 9164276058
ಹುಡುಗರನ್ನು ಪ್ರೀತಿಸಿ ಕೊನೆಗೆ ಕೈ ಕೊಡುವ ಹುಡುಗಿಯರಿಗೆ ನಿಮ್ಮ ಸಲಹೆ ಏನು?
ಕೈ ಬಿಡುವ ಮೊದಲೇ ಕೈ ಕೊಡಿ!
ಜಗದೀಶ ಎಸ್. ಬೆಳಗಾವಿ, 8722444410
ಮೊದಲ ನೋಟದಲ್ಲಿ ಅರಳುವ 'ಸಿಹಿ ಪ್ರೀತಿ'ಯನ್ನು ಜೀವನದ ಕೊನೆಯ ಕ್ಷಣದ ವರೆಗೆ ನಿಜಕ್ಕೂ ಕಾಪಾಡಿಕೊಳ್ತಾರಾ?
ಅರಳಿದ್ದು ಮುದುಡಲೇ ಬೇಕು!
ಫ್ಯಾಷನ್ ಡಿಸೈನರ್ ಮಧು, 9945737427
ಮೌನವನ್ನು ಆಭರಣಕ್ಕೆ ಯಾಕೆ ಹೋಲಿಕೆ ಮಾಡಿದ್ದಾರೆ?
ಮನಮೋಹನ ಸಿಂಗ್ ಅವರನ್ನು ನೋಡಿ.
ಪೇಂಟರ್ ಪಾಪು, ಸಂತೇಮರಹಳ್ಳಿ, 9008877712
-ಬಾಣಭಟ್ಟ