ಇದು ಮಿಂಚಿನ ಧರ್ಮಪತ್ನಿಯೇ ಇರಬೇಕು
ಯಾರಿಗೂ ಹೆದರದ, ಎಲ್ಲರನ್ನೂ ಬೆಚ್ಚಿ ಬೀಳಿಸುವ ಭಯೋತ್ಪಾದಕ
ಜೋರು ಗುಡುಗಿಗೆ ನಡುಗದವರಾರು?
ಇದರ ಬೆಡಗನ್ನು ಕಿವಿ ಮುಚ್ಚಿಕೊಂಡೇ ಆಸ್ವಾದಿಸಬೇಕಷ್ಟೆ
ಈ ಅವಕಾಶವಿರುವುದು ಕಚೇರಿಯ ಬಾಸ್‌ಗೆ ಮತ್ತು ಮನೆಯ ಬಾಸ್‌ಗೆ ಮಾತ್ರ
ಗುಡುಗುವ ಮೋಡ ಸುರಿಸುವುದಿಲ್ಲ
ಮೇಘಾಡಂಬರ; ವರುಣನ ಡಂಗುರ
ಮ್ಯೂಟ್ ವ್ಯವಸ್ಥೆ ಇಲ್ಲದ್ದು, ನೀತಿ ಸಂಹಿತೆಯೂ ತಾಗದ್ದು
ಒಳಗೆ ಖಾಲಿ ಇರುವ ವಸ್ತು ಹೆಚ್ಚು ಶಬ್ದ ಮಾಡುತ್ತದೆ ಎಂಬುದಕ್ಕೆ ಇದೇ ಉದಾಹರಣೆ
ಚುನಾವಣೆ ಹತ್ತಿರ ಬಂದಂತೆ ತಿಳಿ ಆಕಾಶವಿದ್ದರೂ ಕೇಳಿಬರುವುದು
ಗಗನದ ಗದ್ದಲ, ಬಾನಿನ ಬಾನಗಡಿ
ಗುಡುಗಿಗೇ ಧೈರ್ಯ ಉಡುಗಿದರೆ ಸಿಡಿಲಿಗೇನು ಕತೆ?
ಹುಡುಗಿಯೆದುರು ಹುಡುಗನ ಆರ್ಭಟ
ಇದು ಮಿಂಚಿಗಿಂತ ಲೇಟು. ಆದರೆ ಪಂಚು ಮಾತ್ರ ಜಾಸ್ತಿ
ಆಕಾಶದಲ್ಲಿ 'ಭೂಕಂಪ'ವಾದಾಗ...
ಪ್ರತಿಪಕ್ಷದವರಿಗೆ ಎಚ್ಚರವಾದಾಗೆಲ್ಲ ಮಾಧ್ಯಮದವರೆದುರು ಮಾಡುವ ಕೆಲಸ ಇದೇ
ಜನಾರ್ದನ ಪೂಜಾರಿಯವರ ಒಂದೊಂದು ಮಾತೂ ಗುಡುಗಿಗೆ ಸಮ. ಮುಖವೇ ಮೋಡ
ವೇದಿಕೆಯ ಮೇಲೆ ಮಾತಾಡಲಿ ಎಂದು ಮೈಕ್ ಕೊಟ್ಟರೆ ರಾಜಕಾರಣಿಗಳು ಮಾಡೋದು ಇದನ್ನೇ
-ವಿಶ್ವನಾಥ ಸುಂಕಸಾಳ
vishwasunkasal@yahoo.com