ರಾಜಕಾರಣಿಗಳಿಗೆ ಅಧಿಕಾರ ಹೇಗೆ ನಡೆಸಬೇಕು...
ರಾಜಕಾರಣಿಗಳಿಗೆ ಅಧಿಕಾರ ಹೇಗೆ ನಡೆಸಬೇಕು ಎಂದು ತರಬೇತಿ ನೀಡಿದರೆ ಹೇಗೆ?
ತರಬೇತಿ ನೀಡಲು ಹೋದವರೆ ವಾರದೊಳಗೆ ರಾಜಕಾರಣಿಗಳಂತೆ ಆಡತೊಡಗುತ್ತಾರೆ!
ಎಸ್. ಅನುಪಮ, ಮೈಸೂರು
ಕೆಲವರ ಸುಂದರ ನಗುವಿನ ಹಿಂದೆ ಅಡಗಿರುವ 'ವಂಚಿಸುವ' ಮುಖ ಅಷ್ಟು ಸುಲಭವಾಗಿ ಕಾಣುವುದಿಲ್ಲವಲ್ಲ?
ಸುಲಭವಾಗಿ ಕಂಡುಬಿಟ್ಟರೆ ವಂಚಿಸುವುದು ಹೇಗೆ ಸಾಧ್ಯ ಮಧೂ?
ಫ್ಯಾಷನ್ ಡಿಸೈನರ್ ಮಧು, 99457-37427
ಮದುವೆ ಮನೆಯಲ್ಲಿ ಬ್ರಹ್ಮಚಾರಿಗಳಿಗೇನು ಕೆಲಸ?
ತಾಲೀಮು!
ಪಿ.ಜಿ. ಶಿಲ್ಪರಾಜ್ ಶಿವಮೊಗ್ಗ, 9739363071
ಯುವತಿಯರು ಸೀರೆ ಉಟ್ಟಾಗ ಸುಂದರವಾಗಿ ಕಾಣಲು ಕಾರಣವೇನು?
ಸೀರೆ ಉಟ್ಟಾಗ ಮಾತ್ರವಲ್ಲದೆ ಎಲ್ಲ ಬಗೆಯಲ್ಲೂ ನೋಡಿದವರಷ್ಟೆ ಇಂಥ ನಿರ್ಧಾರಕ್ಕೆ ಬರಬಹುದು!
ಮಗ್ಗಳ್ಳಿ ಗುರು, ಬನವಾಸಿ 9480931442
ಆಡುವುದಕ್ಕೆ ಕುರ್ಚಿ ಬೇಕು ಅಂತ ಮಗ ಒಂದೆ ಸಮನೆ ಹಟ ಮಾಡುತ್ತಿದ್ದಾನಲ್ಲ?
ಪಲ್ಲಂಗ ಕೇಳುವುದಕ್ಕೆ ಮೊದಲು ಆತನನ್ನು ಸುಧಾರಿಸಿ!
ಓಂ ಚನ್ನೇಶ್ ಅರಬಿಳಚಿಕ್ಯಾಂಪ್, 9901257131
-ಬಾಣಭಟ್ಟ