ಸಂಪಾದಕೀಯ

ಈವರೆಗೆ ಹುಡುಗಿ, ಗೃಹಿಣಿ, ಅಜ್ಜಿ ಇವರ್ಯಾರೂ ಪ್ರಶ್ನೆ ಕೇಳಿಲ್ಲವೇ?

ಎಂ. ಬಿ. ಕೃಷ್ಣಮೂರ್ತಿ, 9449130531
ಈವರೆಗೆ ಹುಡುಗಿ, ಗೃಹಿಣಿ, ಅಜ್ಜಿ ಇವರ್ಯಾರೂ ಪ್ರಶ್ನೆ ಕೇಳಿಲ್ಲವೇ?
ಅವರೆಲ್ಲ ತಮ್ಮ ಪ್ರಶ್ನೆಗಳನ್ನು ಚಾಚುವುದಕ್ಕೆ ಮನೆಯಲ್ಲೇ ಒಬ್ಬರನ್ನು ಗೊತ್ತು ಮಾಡಿಕೊಂಡಿರುತ್ತಾರೆ!

ವಿ. ಹೇಮಂತ ಕುಮಾರ, 903599290
ಉದಯಿಸುವ ಸೂರ್ಯನಿಗೂ ಮರೆಯಾಗುವ ಸೂರ್ಯನಿಗೂ ವ್ಯತ್ಯಾಸವೇನು?ಈ ಎರಡೂ ಅವತಾರನ್ನೂ ಕಾಣದ 'ಬೀರುಬಲ್ಲ' ವಂಶಸ್ಥನ ಪ್ರಶ್ನೆಯ ಥರ ಇದೆಯಲ್ಲ!

ಪಿ.ಜಿ. ರಾಜ್, ಶಿವಮೊಗ್ಗ, 9739363071
ಮೀಸೆ ಬಂದ ಹುಡುಗನಿಗೆ ದೇಶ ಕಾಣೋದಿಲ್ಲ. ಅದೇ ರೀತಿ ಪ್ರೀತಿಯ ಬಲೆಯಲ್ಲಿ ಬಿದ್ದ ಪ್ರೇಮಿಗಳಿಗೆ ಏನು ಕಾಣುವುದಿಲ್ಲ?
ಬಲೆಯ ತೂತು!

ಜೆ.ಪಿ. ನಾಗರಾದ, ದಾವಣಗೆರೆ, 9901193811
ಭಾಗ್ಯಲಕ್ಷ್ಮಿ ಯೋಜನೆಯಡಿ ಸೀರೆ ಬದಲು ಜೀನ್ಸ್ ಪ್ಯಾಂಟ್, ಟೀ ಶರ್ಟ್ ಕೊಟ್ಟಿದ್ದಿದ್ದರೆ?
ನಾಳೆ ಬಿಕಿನಿ ಏಕೆ ಕೊಟ್ಟಿಲ್ಲ ಅಂತಾನೂ ಕೇಳ್ತೀಯ ಬಿಡು!

ಹರಳಹಳ್ಳಿ ಪುಟ್ಟರಾಜು, ಪಾಂಡವಪುರ, 9632838088
ಸತ್ತವನು ಕೆಟ್ಟವನಿದ್ದರೂ ಅವನನ್ನು 'ಸ್ವರ್ಗವಾಸಿ' ಅನ್ನುವುದೇಕೆ?
ನಾವು ಸತ್ತ ಬಳಿಕ ನಮ್ಮನ್ನೂ ಹಾಗೇ ಕರೆಯಲಿ ಎಂಬ ದೂರಾಲೋಚನೆ!

- ಬಾಣಭಟ್ಟ


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಇಂಧನ ಸ್ಥಾವರಗಳ ಮೇಲಿನ ದಾಳಿಯನ್ನು ನಿಲ್ಲಿಸಲು ರಷ್ಯಾ-ಉಕ್ರೇನ್ ಒಪ್ಪಿಕೊಂಡಿವೆ: ಟ್ರಂಪ್ ಘೋಷಣೆ

ಕೊನೆಯ ಓವರ್‌ನಲ್ಲಿ ಭಾರತಕ್ಕೆ ವಿಂಡೀಸ್ ವಿರುದ್ಧ ರೋಚಕ ಜಯ: T20 ಸರಣಿಯಲ್ಲಿ 2-1 ಮುನ್ನಡೆ!

'We're Sorry': ಅಭಿಜಿತ್ ದೀಪ್ಕೆಗೆ ಅಜ್ಜಿಯ ಸಾವಿನ ಬಗ್ಗೆ ತಿಳಿಸಿದ್ದ ಮಹಿಳಾ ಪೊಲೀಸ್; ಹೇಗಿತ್ತು CJP ನಾಯಕನ ಪ್ರತಿಕ್ರಿಯೆ...: ವಿಡಿಯೋ ವೈರಲ್!

'ಮತದಾನದ ಹಕ್ಕನ್ನೇ ಕಸಿದರೆ ಯಾವ ಪಕ್ಷವೂ ಸುರಕ್ಷಿತವಾಗಿರಲ್ಲ': SIR ವಿರುದ್ಧ ದೇಶಾದ್ಯಂತ ಹೋರಾಟಕ್ಕೆ CJP ಕರೆ

ಸ್ಟಿಂಗ್‌ ಆಪರೇಷನ್ ಆರೋಪ: ಶಾಂಗ್ರೀಲಾ ಹೋಟೆಲ್‌ನಲ್ಲಿ ಯಾರ ಜೊತೆ ಕುಳಿತಿದ್ರಿ; ಸಿಎಂ ಶಿವಕುಮಾರ್ ವಿರುದ್ಧ HDK ಹೊಸ ಬಾಂಬ್