ಸಂಪಾದಕೀಯ

ರಾಘವಾಚಾರ್ಯರ ಸ್ವದೇಶ ನಿಷ್ಠೆ

ಕ.ವೆಂ.ರಾಘವಾಚಾರ್ಯರು ಮಹಾರಾಜ ಕಾಲೇಜಿನಲ್ಲಿ ಮೈಸೂರು ವಿಶ್ವ ವಿದ್ಯಾನಿಲಯದ ಎರಡನೇ ತಂಡದಲ್ಲಿ ಕನ್ನಡ ಎಂ.ಎ.ಪದವಿ ಪಡೆದವರಲ್ಲಿ ಒಬ್ಬರು. ಇವರ ಸಹಪಾಠಿಗಳಾಗಿದ್ದವರು ತೀ.ನಂ.ಶ್ರೀ ಮತ್ತು ಜಿ.ಪಿ.ರಾಜರತ್ನಂ. ಬಿ.ಎಂ. ಶ್ರೀಕಂಠಯ್ಯನವರ ಶಿಷ್ಯರಾಗಿದ್ದ ರಾಘವಾಚಾರ್ಯರು ಬೆಂಗಳೂರಿನಲ್ಲಿದ್ದಾಗ ಗ್ರೀಕ್ ದಂಪತಿಗಳಿಂದ ಆ ಭಾಷೆ ಕಲಿತು ಗ್ರೀಕ್ ನಾಟಕ 'ಅಂತಿಗೊನೆ'ಯನ್ನು ಕನ್ನಡಕ್ಕೆ ಅನುವಾದಿಸುವಷ್ಟು ಪಾರಂಗತರಾದರು. ಅದರ ಜೊತೆಗೆ ಮತ್ತಷ್ಟು ಗ್ರೀಕ್ ನಾಟಕಗಳನ್ನು ಕನ್ನಡಕ್ಕೆ ತಂದರು. 'ನಂದಾ ನೆನಪು' ಇವರ ಆತ್ಮಕಥೆ. ಮೈಸೂರು ವಿಶ್ವವಿದ್ಯಾನಿಲಯದ ಇಂಗ್ಲಿಷ್ ಕನ್ನಡ ನಿಘಂಟಿನ ಕಾರ್ಯಭಾರವನ್ನು ವಹಿಸಿದ್ದರು. ನಂತರ ಮೈಸೂರಿನ ಯುವರಾಜ ಕಾಲೇಜು, ಮಹಾರಾಜ ಕಾಲೇಜುಗಳಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿದರು. ನಂತರ ದೆಹಲಿ ವಿ.ವಿ.ಯಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ನೇಮಕಗೊಂಡರು. ನಿವೃತ್ತರಾದ ಮೇಲೆ ಕನ್ನಡ ಸಾಹಿತ್ಯ ಪರಿಷತ್ತಿನ ನಿಘಂಟು ಸಮಿತಿಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದರು.
ರಾಘವಾಚಾರ್ಯರು ಕಾಲೇಜಿನಲ್ಲಿ ಓದುತ್ತಿದ್ದಾಗ ಸ್ವಾತಂತ್ರ್ಯ ಚಳುವಳಿ ಎಲ್ಲ ಕಡೆ ಜೋರಾಗಿತ್ತು. ಗಾಂಧೀಜಿಯವರ ಪ್ರಭಾವಕ್ಕೆ ಒಳಪಟ್ಟು ಸ್ವದೇಶೀ ಚಳುವಳಿಗೆ ಮನಸೋತಿದ್ದ ಆಚಾರ್ಯರು ತಾವು ಧರಿಸಿದ್ದ ವಿದೇಶಿ ಮೇಲಂಗಿಯನ್ನು ಕಿತ್ತು ಬಿಸುಟು ಸುಟ್ಟು ಹಾಕಿಬಿಟ್ಟರು. ಹಾಗೆಯೇ ಕಾಲೇಜಿಗೂ ಬಂದರು. ಆಗ ಕಾಲೇಜಿನ ಪ್ರಿನ್ಸಿಪಾಲರಾಗಿದ್ದ ಎಂ.ಆರ್.ಪುಲ್ಲರ್ ಎಂಬುವವರು ಶಿಸ್ತಿನ ಸಿಪಾಯಿಯಾಗಿದ್ದರು. ಅವರೆದುರು ಮಾತನಾಡಲು ವಿದ್ಯಾರ್ಥಿಗಳು ಹೆದರುತ್ತಿದ್ದರು. ರಾಘವಾಚಾರ್ಯರು ಅಂಗಿಯಿಲ್ಲದೆ ತರಗತಿಗೆ ಬಂದ ವಿಷಯ ಪ್ರಿನ್ಸಿಪಾಲರಿಗೆ ಗೊತ್ತಾಗಿ ತಮ್ಮ ಕೋಣೆಗೆ ಅವರನ್ನು ಕರೆಸಿ, ಅಂಗಿ ಯಾಕೆ ಹಾಕಿಲ್ಲ ಎಂದು ಪ್ರಶ್ನಿಸಿದರು. ಅದಕ್ಕೆ ಆಚಾರ್ಯರು ಅದನ್ನು ಸುಟ್ಟುಬಿಟ್ಟೆ ಎಂದುತ್ತರಿಸಿದರು. ಮರುದಿನ ಅಂಗಿ ಹಾಕಿಕೊಂಡು ಕಾಲೇಜಿಗೆ ಬರಲು ತಾಕೀತು ಮಾಡಿದರು. ಆದರೆ ತಮ್ಮ ಬಳಿ ಹಣವಿಲ್ಲದ್ದರಿಂದ ಇನ್ನೊಂದು ಅಂಗಿ ಕೊಳ್ಳಲು ಹಣವಿಲ್ಲವೆಂದು ಧೈರ್ಯವಾಗಿ ತಿಳಿಸಿದರು. ಆಗಿನ ಕಾಲದಲ್ಲಿ ವಿದ್ಯಾರ್ಥಿಗಳು ಅಧ್ಯಾಪಕರೊಡನೆ ಮಾತನಾಡಲೇ ಭಯಪಡುತ್ತಿದ್ದಾಗ ಪ್ರಿನ್ಸಿಪಾಲರೊಂದಿಗೆ ಇಷ್ಟು ನಿರ್ಭೀತಿಯಿಂದ ಮಾತನಾಡಿದ ರಾಘವಾಚಾರ್ಯರು ಹೀರೋ ಎನಿಸಿಕೊಂಡರು. ಅಂದಿನಿಂದ ಅವರು ಕೊನೆಯವೆಗೂ ಖಾಧಿ ಧಾರಿಗಳಾಗಿದ್ದುದು ಅವರ ಸ್ವದೇಶಿ ನಿಷ್ಠೆಯನ್ನು ತೋರಿಸುತ್ತದೆ.

- ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಇಂದಿರಾ ಗಾಂಧಿ ಕೂಡ ಹೀಗೆ ಮಾಡಿರಲಿಲ್ಲ': ದೆಹಲಿ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆಯುವ ಮುನ್ನ ಅಭಿಜಿತ್ ದೀಪ್ಕೆ; ವಿಡಿಯೋ ಹಂಚಿಕೊಂಡ CJP

ದೇಶವಿರೋಧಿ ಶಕ್ತಿಗಳಿಂದ ಅಶಾಂತಿ ಸೃಷ್ಟಿಗೆ ಯತ್ನ; CJP ಪ್ರತಿಭಟನೆಯಿಂದ ದೂರವಿರಿ: ಮುಸ್ಲಿಮರಿಗೆ ಇಮಾಮ್‌ ಮುಖ್ಯಸ್ಥ ಕರೆ

CJP ಪ್ರತಿಭಟನೆ: ದೆಹಲಿ ಪೊಲೀಸರ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಕೆ!

Delhi CJP Protest: ಅಭಿಜೀತ್ ದೀಪ್ಕೆ, ಸೌರವ್ ದಾಸ್, ಆಶುತೋಷ್ ರಂಕಾ,ಯೂಟ್ಯೂಬರ್ ಧ್ರುವ್ ರಾಠಿ ಸೇರಿ 200ಕ್ಕೂ ಹೆಚ್ಚು ಮಂದಿ ಪೊಲೀಸ್ ವಶಕ್ಕೆ; Video

ಸ್ಟಾರ್‌ಲಿಂಕ್ ವಿವಾದ: ಭಾರತ ವಸಾಹತಲ್ಲ- Elon Musk ಗೆ ಕಮಲ್ ಹಾಸನ್ ತಿರುಗೇಟು