ಸಂಪಾದಕೀಯ

ಹಳ್ಳಿಯ ಹೈದ ಶ್ರೀಮಂತನಾದದ್ದು ಹೇಗೆ?

ರಾಜಸ್ಥಾನದ ಒಂದು ಪುಟ್ಟ ಹಳ್ಳಿ ಸಾದಲಪುರದಲ್ಲಿ ಜನಿಸಿದ ಒಬ್ಬ ಬಡ ಬಾಲಕ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಸ್ಥಾನಗಳಿಸುವುದೆಂದರೆ...

ರಾಜಸ್ಥಾನದ ಒಂದು ಪುಟ್ಟ ಹಳ್ಳಿ ಸಾದಲಪುರದಲ್ಲಿ ಜನಿಸಿದ ಒಬ್ಬ ಬಡ ಬಾಲಕ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಸ್ಥಾನಗಳಿಸುವುದೆಂದರೆ ಇದೊಂದು ನಿಜಕ್ಕೂ ಎಲ್ಲರಿಗೂ ಸ್ಫೂರ್ತಿದಾಯಕ ವಿಷಯ. ಕಲ್ಕತ್ತದ ಸೈಂಟ್ ಕ್ಸೇವಿಯರ್ ಕಾಲೇಜಿನಲ್ಲಿ ವಾಣಿಜ್ಯ ವಿಷಯದಲ್ಲಿ ಪದವಿ ಪಡೆದ ಲಕ್ಷ್ಮಿ ಮಿತ್ತಲ್ ಅವರೇ ಈ ವ್ಯಕ್ತಿ. ಲಕ್ಷ್ಮಿ ಮಿತ್ತಲ್ ಅವರ ತಂದೆ ಮೋಹನ್ ಮಿತ್ತಲ್ ಮೊದಲು ಸಾದಲಪುರದ ನಿವಾಸಿಯಾಗಿ, ದೊಡ್ಡ ಕುಟುಂಬದ ಸದಸ್ಯರಾಗಿದ್ದವರು. ಅಷ್ಟೇನೂ ಅನುಕೂಲಸ್ಥರಾಗಿರದ ಅವರಿಗೆ ಅಲ್ಲಿ ಜೀವನ ನಡೆಸುವುದು ಕಷ್ಟವೆಂದು ತೋರಿ ಕಲ್ಕತ್ತಕ್ಕೆ ವಲಸೆ ಹೋದರು. ಅಲ್ಲಿ ಸಣ್ಣಕೈಗಾರಿಕೆಯೊಂದನ್ನು ಸ್ಥಾಪಿಸಿ ಕೈಗಾರಿಕೋದ್ಯಮಿಯಾದರು. ನಂತರ ಅವರು ಒಂದು ಉಕ್ಕು ಕಾರ್ಖಾನೆ ಸ್ಥಾಪಿಸಲು ಸ್ವಲ್ಪ ಜಾಗವನ್ನು ಇಂಡೋನೇಷ್ಯಾದಲ್ಲಿ ಕೊಂಡಿದ್ದರು. ಆದರೆ ಅದಕ್ಕೆ ತುಂಬಾ ಬಂಡವಾಳ ಬೇಕಾಗಿದ್ದರಿಂದ ಅದನ್ನು ಮಾರಲು ನಿರ್ಧರಿಸಿದರು. ಆದರೆ, ಲಕ್ಷ್ಮಿ ಮಿತ್ತಲ್ ಅವರ ಯೋಚನೆಯೇ ಬೇರೆಯಾಗಿತ್ತು. 1977ರಲ್ಲಿ ಅಲ್ಲೊಂದು ಕಾರ್ಖಾನೆ ಪ್ರಾರಂಭ ಮಾಡಲು ನಿರ್ಧರಿಸಿದರು. ಅದು ಲಾಭಗಳಿಸಲು ಪ್ರಾರಂಭಿಸಿದಾಗ ಅವರ ಆತ್ಮವಿಶ್ವಾಸ ಹೆಚ್ಚಿತಲ್ಲದೆ, ಇನ್ನೂ ಹೆಚ್ಚು ಉದ್ದಿಮೆಗಳನ್ನು ಸ್ಥಾಪಿಸಲು ಮುಂದಾದರು. ವಿವಿಧ ದೇಶಗಳಲ್ಲಿ ನಷ್ಟದಲ್ಲಿ ನಡೆಯುತ್ತಿದ್ದ ಉಕ್ಕಿನ ಕಾರ್ಖಾನೆಗಳನ್ನು ಕೊಂಡು ಅದನ್ನು ಲಾಭದಾಯಕವಾಗಿ ಮಾಡಿ ಅದರಿಂದ ಅಪಾರ ಸಂಪತ್ತು ಗಳಿಸಿದರು. ಇಂದು ಮಿತ್ತಲ್ ಅವರ ಕಾರ್ಖಾನೆಗಳು ಮೆಕ್ಸಿಕೊ, ಅಮೆರಿಕ, ಆಫ್ರಿಕಾ, ಏಷ್ಯಾ, ಟ್ರಿನಿಡಾಡ್ ಮುಂತಾದ ಹದಿನಾಲ್ಕು ದೇಶಗಳಲ್ಲಿ ಸ್ಥಾಪಿತವಾಗಿ ಅವರು ವಿಶ್ವದ ಉಕ್ಕಿನ ದೊರೆ ಎನಿಸಿದ್ದಾರೆ. ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಆರನೇ ಸ್ಥಾನ ಗಳಿಸಿರುವ ಮಿತ್ತಲ್, ಇಂಗ್ಲೆಂಡಿನ ಶ್ರೀಮತರ ಪಟ್ಟಿಯಲ್ಲಿ ಮೊದಲ ಸ್ಥಾನ ಗಳಿಸಿದ್ದಾರೆ. ಅವರ ಆಸ್ತಿಯ ಬೆಲೆಯೇ 16 ಬಿಲಿಯನ್ ಡಾಲರ್‌ಗಳಷ್ಟಿದೆ. ಇಂಗ್ಲೆಂಡಿನಲ್ಲಿ 70 ಮಿಲಿಯನ್ ಯೂರೋ ಬೆಲೆಬಾಳುವ ಬಂಗಲೆಯಲ್ಲಿ ವಾಸವಾಗಿರುವ ಲಕ್ಷ್ಮಿ ಮಿತ್ತಲ್ ಭಾರತದ ಪೌರತ್ವವನ್ನು ಬಿಟ್ಟುಕೊಟ್ಟಿಲ್ಲ. ಲಕ್ಷಾಂತರ ಜನರಿಗೆ ಉದ್ಯೋಗ ಒದಗಿಸಿಕೊಟ್ಟಿರುವ ಮಿತ್ತಲ್ ಇಂದಿಗೂ ಶಿಸ್ತಿನ ಜೀವನ ನಡೆಸುತ್ತಿದ್ದಾರೆ. ಭಾರತ ಸರ್ಕಾರದಿಂದ ಪದ್ಮವಿಭೂಷಣ ಪ್ರಶಸ್ತಿ ಪಡೆದಿರುವ ಅವರು ಭಾರತೀಯ ಆಟಗಾರರಿಗೆ ಪ್ರೋತ್ಸಾಹಿಸಲು ಮಿತ್ತಲ್ ಚಾಂಪಿಯನ್ಸ್ ಟ್ರಸ್ಟ್ ಅನ್ನು ಸ್ಥಾಪಿಸಿದ್ದಾರೆ. ಮನಸ್ಸು ಮತ್ತು ಬದ್ಧತೆ ಇದ್ದರೆ ಏನು ಬೇಕಾದರೂ ಸಾಧಿಸಬಹುದು ಎನ್ನುವುದಕ್ಕೆ ಲಕ್ಷ್ಮಿ ಮಿತ್ತಲ್ ಮಾದರಿಯಾಗಿದ್ದಾರೆ.


 -ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಇಂದಿರಾ ಗಾಂಧಿ ಕೂಡ ಹೀಗೆ ಮಾಡಿರಲಿಲ್ಲ': ದೆಹಲಿ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆಯುವ ಮುನ್ನ ಅಭಿಜಿತ್ ದೀಪ್ಕೆ; ವಿಡಿಯೋ ಹಂಚಿಕೊಂಡ CJP

ದೇಶವಿರೋಧಿ ಶಕ್ತಿಗಳಿಂದ ಅಶಾಂತಿ ಸೃಷ್ಟಿಗೆ ಯತ್ನ; CJP ಪ್ರತಿಭಟನೆಯಿಂದ ದೂರವಿರಿ: ಮುಸ್ಲಿಮರಿಗೆ ಇಮಾಮ್‌ ಮುಖ್ಯಸ್ಥ ಕರೆ

CJP ಪ್ರತಿಭಟನೆ: ದೆಹಲಿ ಪೊಲೀಸರ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಕೆ!

Delhi CJP Protest: ಅಭಿಜೀತ್ ದೀಪ್ಕೆ, ಸೌರವ್ ದಾಸ್, ಆಶುತೋಷ್ ರಂಕಾ,ಯೂಟ್ಯೂಬರ್ ಧ್ರುವ್ ರಾಠಿ ಸೇರಿ 200ಕ್ಕೂ ಹೆಚ್ಚು ಮಂದಿ ಪೊಲೀಸ್ ವಶಕ್ಕೆ; Video

ಸ್ಟಾರ್‌ಲಿಂಕ್ ವಿವಾದ: ಭಾರತ ವಸಾಹತಲ್ಲ- Elon Musk ಗೆ ಕಮಲ್ ಹಾಸನ್ ತಿರುಗೇಟು