ಕೆನ್ನಾಳು ಭಾಸ್ಕರ್, 9036416729
ನೆಮ್ಮದಿ ಇರುವ ಸ್ಥಳವಿದ್ದರೆ ತಿಳಿಸುವಿರಾ ಭಟ್ರೆ?
ತಿಳಿಸೋಲ್ಲ. ನೀವು ಅಲ್ಲಿಗೂ ಬಂದು ನನ್ನ ನೆಮ್ಮದಿ ಹಾಳು ಮಾಡುತ್ತೀರಿ!
ರಮೇಶ್ ಭಟ್ ಆವರ್ಸೆ, ಕುಂದಾಪುರ, 9164276058
ಮೊಬೈಲ್ ಕಂಡುಹಿಡಿದವರು ಅಮೆರಿಕದವರು, ಸಿಮ್ ಕಂಡು ಹಿಡಿದವರು ಜಪಾನ್‌ನವರು, ಆದರೆ ಈ ಮಿಸ್ಡ್ ಕಾಲ್ ಕಂಡು ಹಿಡಿದವರು ಯಾರು ಭಟ್ರೆ?
ಇಷ್ಟು ಬರೆಯುವ ಬದಲು ಒಂದು ಮಿಸ್ ಕಾಲ್ ಕೊಡಬಾರದಿತ್ತಾ?
ಹರಳಹಳ್ಳಿ ಪುಟ್ಟರಾಜು, ಪಾಂಡವಪುರ, 9632838088
ಮನುಷ್ಯನಿಗೆ ಕನಸುಗಳಿರಬೇಕಾ, ಆಸೆಗಳಿರಬೇಕಾ?
ಕನಸುಗಳಿರಬೇಕು, ಅದೆಲ್ಲವೂ ನನಸಾಗಬೇಕೆಂಬ ಆಸೆಗಳಿರಬಾರದು!
ಎಂ.ಬಿ.ಕೃಷ್ಣಮೂರ್ತಿ, ಚಾಮರಾಜನಗರ, 9449130531
ರಾಜಕೀಯ ಮಾಡುವವರಿಗೆ ಬೇರೇನೂ ಮಾಡಲು ಬರುವುದಿಲ್ಲವೇ?
ಬೇರೆ ಏನು ಮಾಡಿದ್ರೂ ಜನ ಅದರಲ್ಲಿ ರಾಜಕೀಯವನ್ನೇ ಕಾಣ್ತಾರೆ!
ಜೆ.ಪಿ. ನಾಗರಾಜ್, ದಾವಣಗೆರೆ, 9901193811
ಇಲ್ಲೊಬ್ಬಳು ಚಳಿಗೂ ಛತ್ರಿ ಹಿಡಿಯುತ್ತಾಳಲ್ಲ?
'ನನ್ನ ಸ್ವೆಟರ್ ಕೊಡಲಾ?' ಎಂದು ಹುಡುಗರು ಛತ್ರಿ ಹಿಡಿಯಲು ಬಂದಾರೆಂಬ ಮುನ್ನೆಚ್ಚರಿಕೆ!
- ಬಾಣಭಟ್ಟ