ಮುತ್ತಿನಂಥ ಮಾತು ಅಥವಾ ಮುತ್ತಿನ ಕುರಿತಾದ ಮಾತು
ಉನ್ಮತ್ತನ ನುಡಿಯಲ್ಲ ಇವು. ಮತ್ತಿನಲ್ಲಿ ನುಡಿದವೂ ಅಲ್ಲ
ಯೋಚಿಸಿ ಆಡಿದ್ದು, ಅನುಭವದ ಮೂಲದ್ದು
ನುಡಿದರೂ ಒಡೆಯದ ಮುತ್ತು
ಸ್ಫಟಿಕದ ಶಲಾಕೆಯಂಥದ್ದು ರತ್ನದ ಹಾರದಂಥದ್ದು
ನಾವೆಲ್ಲ ಒಂದು ಕಿವಿಯಲ್ಲಿ ಕೇಳಿ ಮತ್ತೊಂದು ಕಿವಿಯಲ್ಲಿ ಬಿಡುವಂಥದ್ದು
ಹಿರಿಯರ ಹಿತವಚನ
ಉಪದೇಶವೂ ಹೌದು. ಆದೇಶವೂ ಹೌದು
ಕೇಳಿದರೂ ಕೆಲವೊಮ್ಮೆ ಅರ್ಥವಾಗದ ಅನುಭವದ ನುಡಿ
ಮಹಾತ್ಮರ ಉವಾಚಗಳು
ಬುದ್ಧಿ ಜೀವಿಗಳ ಮಾತಲ್ಲ ಇದು ಬುದ್ಧಿ ಇರುವವರಾಡಿದ್ದು
ಮುತ್ತು ನೀಡುವಾಗ ಆಡುವ ನುಡಿ
ಕೇಳಲು ಮತ್ತು ಅರಿಯಲು ಯೋಗ್ಯವಾದದ್ದು
-ವಿಶ್ವನಾಥ ಸುಂಕಸಾಳ