ಸಂಪಾದಕೀಯ

ಬುದ್ಧನಿಗೆ ಬೋಧಿವೃಕ್ಷದ ಕೆಳಗೆ ಜ್ಞಾನೋದಯವಾಯಿತು. ಆದರೆ ಈ ಹುಡುಗಿಯರಿಗೆ?

ಆರೀಫ್ (ಅಪ್ಪು), ದಾವಣಗೆರೆ, 9964280609
ಬುದ್ಧನಿಗೆ ಬೋಧಿವೃಕ್ಷದ ಕೆಳಗೆ ಜ್ಞಾನೋದಯವಾಯಿತು. ಆದರೆ ಈ ಹುಡುಗಿಯರಿಗೆ?
ಮದುವೆ ಮಂಟಪಕ್ಕೆ ಹಾಕಿದ ಬಾಳೆ ಗಿಡದ ಬುಡದಲ್ಲಿ!

ಪವನಕುಮಾರ ಕೆ.ವಿ. ಬಳ್ಳಾರಿ, 9900515957
ನಾನು ಬಡವ, ನೀನು ಬಡವಿ, ಒಲವೇ ನಮ್ಮ ಬದುಕು ಎಂದವರು ವರಕವಿ ಬೇಂದ್ರೆಯವರು. ಈಗಿನ ಪ್ರೇಮಿಗಳು ಹೇಳುವ ಮಾತೇನು?
ನಾನು ದುಡಿದು, ನೀನು ದುಡಿದು, ಹಣವೇ ನಮ್ಮ ಬದುಕು!

ಕಾಳೀಹುಂಡಿ ಶಿವಕುಮಾರ, ಮೈಸೂರು
ಇಲ್ಲೊಬ್ಬ ಮುದ್ದೆ ತಿಂದರೂ ಸಹಾ ನಿದ್ದೆ ಬರೋದಿಲ್ಲಾ ಅಂತಾನಲ್ಲ ಭಟ್ರೇ?
ಕೋಳಿ ತಿಂದೋರೆಲ್ಲ ಕೋಳಿ ಕೂಗೊ ಹೊತ್ಗೆ ಎದ್ದೇಳಲ್ಲ ಬಿಡು!

ಎಂ.ಬಿ. ಕೃಷ್ಣಮೂರ್ತಿ, ಚಾಮರಾಜನಗರ
ಮದುವೆ ಆಗದಿದ್ದರೂ ದಾಂಪತ್ಯದಲ್ಲಿ ವಿರಸ ಎಂದು ಜ್ಯೋತಿಷಿ ಹೇಳುತ್ತಾನಲ್ಲಾ?
ಅದು ಅವರ ಸ್ವಂತ ಅನುಭವ ಇರಬೇಕು!

ನೇರಲಗುಡ್ಡ ಶಿವಕುಮಾರ್, ಶಿರಾ, 9480343742
ಗೃಹಿಣಿಯನ್ನು ಹೋಂ ಮಿನಿಸ್ಟರ್ ಎನ್ನಬಹುದಾದರೆ ಗೃಹಸ್ಥನನ್ನು ಎಕ್ಸ್‌ಟರ್ನಲ್ ಮಿನಿಸ್ಟರ್ ಅನ್ಬೋದಾ?
ಹೊರಗಿನ (ಎಕ್ಸ್‌ಟರ್ನಲ್) ಸಂಬಂಧ (ಅಫೇರ್) ಇರಿಸಿಕೊಂಡವರನ್ನು ಖಂಡಿತ ಹಾಗೇ ಕರೆಯಬಹುದು.

 ಬಾಣಭಟ್ಟ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಇಂಧನ ಸ್ಥಾವರಗಳ ಮೇಲಿನ ದಾಳಿಯನ್ನು ನಿಲ್ಲಿಸಲು ರಷ್ಯಾ-ಉಕ್ರೇನ್ ಒಪ್ಪಿಕೊಂಡಿವೆ: ಟ್ರಂಪ್ ಘೋಷಣೆ

ಕೊನೆಯ ಓವರ್‌ನಲ್ಲಿ ಭಾರತಕ್ಕೆ ವಿಂಡೀಸ್ ವಿರುದ್ಧ ರೋಚಕ ಜಯ: T20 ಸರಣಿಯಲ್ಲಿ 2-1 ಮುನ್ನಡೆ!

'We're Sorry': ಅಭಿಜಿತ್ ದೀಪ್ಕೆಗೆ ಅಜ್ಜಿಯ ಸಾವಿನ ಬಗ್ಗೆ ತಿಳಿಸಿದ್ದ ಮಹಿಳಾ ಪೊಲೀಸ್; ಹೇಗಿತ್ತು CJP ನಾಯಕನ ಪ್ರತಿಕ್ರಿಯೆ...: ವಿಡಿಯೋ ವೈರಲ್!

'ಮತದಾನದ ಹಕ್ಕನ್ನೇ ಕಸಿದರೆ ಯಾವ ಪಕ್ಷವೂ ಸುರಕ್ಷಿತವಾಗಿರಲ್ಲ': SIR ವಿರುದ್ಧ ದೇಶಾದ್ಯಂತ ಹೋರಾಟಕ್ಕೆ CJP ಕರೆ

ಸ್ಟಿಂಗ್‌ ಆಪರೇಷನ್ ಆರೋಪ: ಶಾಂಗ್ರೀಲಾ ಹೋಟೆಲ್‌ನಲ್ಲಿ ಯಾರ ಜೊತೆ ಕುಳಿತಿದ್ರಿ; ಸಿಎಂ ಶಿವಕುಮಾರ್ ವಿರುದ್ಧ HDK ಹೊಸ ಬಾಂಬ್