ಅವಿವಾಹಿತರಿಗೆ ಗೊತ್ತಿಲ್ಲದ ವಿವಾಹಿತರು ಹೇಳದ ರಹಸ್ಯಗಳ ಕಣಜ
ಜೇನುಗೂಡು ಒಳಗೆ ಜೇನಿದೆ, ಮುಟ್ಟಿದಿರೋ ಕೆಟ್ಟಿರಿ
ಕೆಲವಷ್ಟರ ಆರಂಭ, ಹೆಚ್ಚಿನದರ ಅಂತ್ಯ
ಏನಾದರೂ ಆಗು, ಆಗುವುದೆಲ್ಲ ಆದ ಮೇಲೆ ಮದುವೆಯಾಗು
ಮದುವೆ ಎಂಬುದು ಹೆಣ್ಣಿನ ಕೊನೆಯ ಗುರಿ. ಗಂಡು ಮಾತ್ರ ಬುಗುರಿ
ಸುಖದ ದ್ವಾರವೆಂಬ ಸುಳ್ಳು ಆರೋಪ ಇದಕ್ಕಿದೆ
ಮದುವೆಯಾದ ಮೇಲೆ ಹುಚ್ಚು ಬಿಡುವುದಂತೆ. ಆದರೆ ಅದು ಮದುವೆಯಾಗಬೇಕೆಂಬ ಹುಚ್ಚು ಮಾತ್ರ
ಹೆಣ್ಣಿನ ಕತೆ ಆರಂಭ. ಗಂಡಿನ ಕತೆ ಮುಕ್ತಾಯ
ತಾಳಿ ತಾಳಿ ಎಂದರೂ ಕೇಳದೇ ತಾಳಿ ಕಟ್ಟುವ ಸಂದರ್ಭ
ಎರಡು ಜೀವಗಳ ಸಂಕಲನ ಮದುವೆ. ಭಾಗಾಕಾರವೇ ಡೈವೋರ್ಸ್
ಗಂಡನ್ನು ಹೆಣ್ಣಿಗೆ ಕೂಡಿಸುವ ಮತ್ತು ಕೂಡ್ರಿಸುವ ಬಂಧಕ
ಇದು ಸಿಕ್ಕದಿದ್ದರೆ ಮಾತ್ರವಲ್ಲ, ಸಿಕ್ಕರೂ ಹುಳಿ ದ್ರಾಕ್ಷಿಯೇ
-ವಿಶ್ವನಾಥ ಸುಂಕಸಾಳ