ತಪ್ಪಾಯ್ತು ತಿದ್ಕೋತೀವಿ
(ಎನ್.ಜಿ. ವೇಣುಗೋಪಾಲ ಅವರ ಪತ್ರ, ನಿನ್ನೆಯಿಂದ ಮುಂದುವರಿದಿದ್ದು)
'ಮುಖ ಪುಟದಲ್ಲಿ ದಪ್ಪ ಅಕ್ಷರಗಳಿರುವ 'ಗುಳುಂಗೆ ಸ್ಕೆಚ್' ಬಗ್ಗೆ. ಇಲ್ಲಿ 'ಗುಳುಂ' ಪದವನ್ನು 'ಗುಳುಂಗೆ' ಎಂದು ಬರೆದರೆ, gulunge ಎಂದು ಆಗುತ್ತದೆ. ಇದು gulumge ಆಗಬೇಕು. ಒಂದೋ ಗುಳುಂ ಆದ ಮೇಲೆ 'ಗೆ'ಗೆ ಮಧ್ಯೆ ಸ್ವಲ್ಪ Space ಬಿಡಬೇಕು. 'ಗುಳುಂ ಗೆ' ಎಂದು. ಇಲ್ಲವೇ 'ಗುಳುಮ್ಗೆ' ಎಂದು ಬರೆಯಬೇಕು. ಏನಂತೀರಿ?'
'ಇಲ್ಲಿ ಉದಾಹರಣೆಯಾಗಿ, ಸತ್ಯ, ಸತ್ಯಂ ಎಂಬ ಇಬ್ಬರ ಬಗ್ಗೆ ಬರೆಯುವಾಗ 'ಸತ್ಯಂಗೆ, ಸತ್ಯಂಗೆ' ಎಂದು ತಾನೇ ಬರೆಯಬೇಕು. ಈಗ ಬರೆದಿರುವುದು 'ಗುಳುಂ' ಆಗುವುದಿಲ್ಲ. ನೋಡಿ.'
'ಇನ್ನೂ ಇದೇ ಮುಖಪುಟದಲ್ಲಿ 'ಹೈ ಸ್ಫೋಟ: ಉಗ್ರ ಒಬೆದ್ ವಿಚಾರಣೆ' ಶೀರ್ಷಿಕೆಯಡಿ ಪ್ಯಾರಾ 3ರ ಮೊದಲ ಸಾಲಿನಲ್ಲಿ 'ಪತ್ರಕರ್ತರು' ಎಂಬುದು 'ಪರ್ತಕರ್ತರು' ಆಗಿದೆ. ಪುಟ 4ರಲ್ಲಿ 'ಇಂದು ರಥೋತ್ಸವ' ಶೀರ್ಷಿಕೆಯಡಿ 3ನೇ ಸಾಲಿನಲ್ಲಿ 'ಶ್ರೀ ಆಂಜನೇಯಸ್ವಾಮಿರವರ' ಎಂದಿದೆ. ಈ 'ರವರ' 'ಅವರ' ಇವುಗಳು ವ್ಯಕ್ತಿಗಳಿಗೆ ಅದರಲ್ಲೂ ರಾಜಕಾರಣಿಗಳಿಗೆ ಬರೆಯುವ ಪ್ರಯೋಗ. ಇದು 'ಶ್ರೀ ಆಂಜನೇಯಸ್ವಾಮಿ ರಥೋತ್ಸವ' ಎಂದಿದ್ದರೆ ಸಾಕು.'
'ಇನ್ನು ಇದೇ ಪುಟ 4ರಲ್ಲಿ 'ಲಂಚ ಪಡೆವಾಗ ಮುಖ್ಯಪೇದೆ ಲೋಕಾಯುಕ್ತ ಬಲೆಗೆ' ಶೀರ್ಷಿಕೆಯಡಿ ಕಾಲಂ 2ರ ಮೊದಲ ಸಾಲಿನಲ್ಲಿ 'ಸೋಹೆಲ್ನ ಎಂಬುವವರನ್ನು' ಎಂದಿದೆ. ಇದು 'ಸೋಹೆಲ್' ಎಂಬುವವರನ್ನು ಎಂದಿರಬೇಕು. ಇದೇ ವರದಿಯ ಕಾಲಂ 3ರ 4ನೇ ಸಾಲಿನಲ್ಲಿ 'ಆಯೂನೂಬ್' ಎಂದಿದೆ. ಇದು 'ಆಯೂಬ್' ಎಂದಿರಬೇಕು.'
'ಪುಟ 5ರಲ್ಲಿ ಉಪಶೀರ್ಷಿಕೆ 'ನಿರಂತರ ಉಲ್ಲಂಘನೆ...' ವರದಿಯ 6ನೇ ಸಾಲಿನಲ್ಲಿ 'ಭೀಷಣ ಪ್ರತಿಜ್ಞೆ' ಎಂದಿದೆ. ಇದು 'ಭೀಷ್ಮ ಪ್ರತಿಜ್ಞೆ' ಎಂದಿರಬೇಕು. ಪುಟ 14ರಲ್ಲಿ 'ಇಂದಿರೇಶನ್ ಇನ್ನಿಲ್ಲ' (ಸುದ್ದಿ ಸಂಕ್ಷೇಪ) ಶೀರ್ಷಿಕೆಯಡಿ ವರದಿಯ ಕೊನೆಯ ಸಾಲಿನಲ್ಲಿ 'ಇಂದಿರೇಶನ್' ಅವರು 'ಇಂದಿರೇಷನ್' ಆಗಿದ್ದಾರೆ.'
'ಪುಟ 15ರಲ್ಲಿ 'ಶತಾಯುಷಿ ಫೌಜಾ ವಿದಾಯ' ಶೀರ್ಷಿಕೆಯಡಿ ವರದಿಯ ಪ್ಯಾರಾ 5ರ ಸಾಲಿನಲ್ಲಿ 'ಗುರಿ ತಲುಪಿದ್ದ' ಎನ್ನುವುದು 'ಗುರಿ ತುಲಿಪಿದ್ದ' ಎಂದಾಗಿದೆ. ಬೈಟುಕಾಫಿ ಪುರವಣಿಯ ಪುಟ 2ರಲ್ಲಿ 'ಕಾಂಗರೂ ಎಂಬ ವಿಚಿತ್ರ ಪ್ರಾಣಿ' ಶೀರ್ಷಿಕೆಯಡಿ ಮೊದಲ ಪ್ಯಾರಾದ ಕೊನೆಯಲ್ಲಿ 'ಕಾಂಗರೂ' ಎಂಬುದು 'ಕಾಂಗಲೂ' ಎಂದಾಗಿದೆ.'
'ಇನ್ನು ಫೆಬ್ರವರಿ 25ರ 'ತಪ್ಪಾಯ್ತು ತಿದ್ಕೋತೀವಿ' ವಿಭಾಗದಲ್ಲೇ ತಪ್ಪಾಗಿದೆ. ವಿ. ಹೇಮಂತಕುಮಾರ್ ಅವರು ಮುಖಪುಟದಲ್ಲಿನ ತಪ್ಪನ್ನು ತಿದ್ದಿ, 'ಅದು ರಾಸಾಯನಶಾಸ್ತ್ರ ಎಂದಿರಬೇಕಿತ್ತು' ಎಂದು ಬರೆದಿದ್ದಾರೆ. ತಾವು ತಪ್ಪನ್ನು ತಿದ್ದಿ "ರಾಸಾಯನ ಶಾಸ್ತ್ರ ಸರಿಯಾದ ಬಳಕೆ" ಎಂದು ತಿಳಿಸಿದ್ದೀರಿ. ತಾವು ತಿಳಿಸಿದ ಸರಿಯಾದ ಬಳಕೆಯನ್ನೇ ಅವರೂ ಬರೆದಿದ್ದಾರೆ' ಎಂದಿದ್ದಾರೆ.
ವಿ. ಹೇಮಂತ ಕುಮಾರ ಅವರು 'ರಸಾಯನಶಾಸ್ತ್ರ' ಎಂದು ತಿದ್ದಿದ್ದರು. ಅದಕ್ಕಾಗಿ ಅದನ್ನು 'ರಾಸಾಯನಶಾಸ್ತ್ರ' ಎಂದು ತಿದ್ದಲಾಗಿತ್ತು. ಆದರೆ ನಮ್ಮ ಕರಡು ತಿದ್ದುವವರು ತಪ್ಪೆಂದು ಭಾವಿಸಿ ಇದನ್ನು ಸರಿಮಾಡಿದ್ದರಿಂದ ಈ ತಪ್ಪಾಗಿದೆ!
ವಿಶ್ವೇಶ್ವರ ಭಟ್