ಜೊತೆ ಜೊತೆಯಾಗಿ ಏಳು ಹೆಜ್ಜೆ ನಡೆಯುವ ಏಕೈಕ ಸಂದರ್ಭ. ನಂತರ ಹೆಜ್ಜೆ ತಪ್ಪೋದೇ ಜಾಸ್ತಿ
ಒಂಟಿತನದಿಂದ ಬೇಸರಗೊಂಡವರು ಮದುವೆಯಾಗುತ್ತಾರೆ. ಒಂಟಿತನ ಬಯಸುವವರು ಡೈವೋರ್ಸ್ ಆಗುತ್ತಾರೆ
ಮದುವೆ-ರೂಪಾಂತರ
ಮದುವೆಯ ಬಗ್ಗೆ ಎಷ್ಟೇ ಟೀಕಿಸಿದರೂ ಆತ ಮದುವೆಯಿಂದ ತಪ್ಪಿಸಿಕೊಳ್ಳಲಾರ
ಮದುವೆಗೂ ಕನಿಷ್ಟ ವಯಸ್ಸನ್ನು ನಿಗದಿಪಡಿಸಲಾಗಿದೆ. ಯಾವುದೇ ಶಿಕ್ಷೆಗೂ ಕೂಡ ಅಷ್ಟೇ
ಜೀವನವೆಂದರೆ ಸುಖ, ನೆಮ್ಮದಿ, ನಿಶ್ಚಿಂತೆ ಇಷ್ಟಕ್ಕೇ ಮೀಸಲಲ್ಲ. ಹಾಗಾಗಿ ಮದುವೆಯಾಗಬೇಕು
ಎಲ್ಲರೂ ಸುಖವಾಗಿರಲು ಇಚ್ಛಿಸಿದರೆ ಮದುವೆಯಾಗುವವರು ಯಾರು?
ಪ್ರತಿನಿತ್ಯ ಮನೆ ತಲುಪಲೇ ಬೇಕೆಂಬಂತೆ ಮಾಡುವ ಅನಿವಾರ್ಯತೆ
ಏನಾದರೂ ಸಾಧಿಸುವುದಿದ್ದರೆ ಮದುವೆಯಾಗುವುದರೊಳಗೇ ಸಾಧಿಸುವುದು ಒಳ್ಳೆಯದು. ಏನಿದ್ದರೂ ಹಗೆ ಸಾಧಿಸುವುದು ಮಾತ್ರ
ಮದುವೆಯಾಗಬೇಡಿ ಎಂದು ಹೇಳಿದರೆ ಯಾರೂ ಕೇಳುವುದಿಲ್ಲ. ಬದಲಿಗೆ ಮದುವೆಯಾಗಿ ಮತ್ತು ಬಿಡಬೇಡಿ ಎನ್ನಿ
ಯಮಗಂಡ ಕಾಲ
-ವಿಶ್ವನಾಥ ಸುಂಕಸಾಳ