ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ತಪ್ಪಾಯ್ತು ತಿದ್ಕೋತೀವಿ

Parashurama
Updated On : 22 Mar 2013, 10:05 am

ಬೆಂಗಳೂರಿನಿಂದ ವಿ. ಹೇಮಂತ ಕುಮಾರ್ ಅವರು ಬರೆಯುತ್ತಾರೆ- 'ಫೆ.22ರ ಸಂಚಿಕೆಯ 2ನೇ ಪುಟದಲ್ಲಿ 'ಗುತ್ತಿಗೆ ನೌಕರನಿಂದ ಲಕ್ಷಾಂತರ ಗುಳುಂ' ಶೀರ್ಷಿಕೆಯ ಲೇಖನದಲ್ಲಿ 'ಕೆ.ಎಂ.ಬಿ. ಪ್ರಸಾದ್ ಅವರು 'ವಂಸತ್' ಮಾಧವ್ ವಿರುದ್ಧ ಶಿಸ್ತುಕ್ರಮ' ಎಂದು ಪ್ರಕಟವಾಗಿದ್ದು, ಅದು 'ವಸಂತ' ಮಾಧವ್ ಎಂದಿರಬೇಕಿತ್ತು. ಅದೇ ಲೇಖನ ಮುಂದುವರೆದು, ಕೈಬರಹದ ಬಿಲ್ ನೀಡಿ 'ತಿಥಿಗಳಿಂದ' ಹಣ ಪಡೆದಿದ್ದಾರೆ ಎಂದಿದೆ. ಅದು 'ಅತಿಥಿ'ಗಳಿಂದ ಎಂದಿರಬೇಕಿತ್ತು. ಅತಿಥಿಗಳು ತಿಥಿಗಳಾಗಿದ್ದಾರೆ ಹಾಗೂ ಅರುಣ್ ಕುಮಾರ್ ಆರೋಪದಂತೆ 'ವಸಂತ, ಮಾಧವ್' ಟೆಲಿಫೋನ್ ಬಿಲ್ ಹೆಸರಿನಲ್ಲಿ ಎಂದಿದ್ದು ವಸಂತ ಮಾಧವ್ ಒಬ್ಬ ವ್ಯಕ್ತಿಯಾಗಿರುವಾಗ 'ವಸಂತ್ ಮಾಧವ್' ಎಂದು ಹೆಸರಿನ ಮಧ್ಯೆ (,) ಅಲ್ಪವಿರಾಮ ಅವಶ್ಯಕವೇ?
'ಫೆ.26ರ ಸಂಚಿಕೆಯ ಪುಟ 8ರಲ್ಲಿ ತೆರೆದ ಕಿಟಕಿ ಅಂಕಣದಲ್ಲಿ ಈ ಆಘಾತಕಾರಿ 'ವಿದ್ಯಮಾನ'ವನ್ನು ಎಂದಿದೆ. 'ವಿದ್ಯಮಾನ'ವೋ 'ವಿದ್ಯಾಮಾನವೋ' ಪುಟ 12ರಲ್ಲಿ 'ಬಿಸಿಲಿನ ಗುಮ್ಮಟ....' ಲೇಖನದಲ್ಲಿ ಏಪ್ರಿಲ್ನಲ್ಲಿ 'ಬಿಸಿಲಿನತ' ತಾಪ ಎಂದಿದೆ. 'ಬಿಸಿಲಿನ ತಾಪ' ಸಾಕಲ್ಲವೇ? ಅದೇ ಲೇಖನದಲ್ಲಿ ಮುಂದುವರಿದು ತಾಪಕ್ಕೆ ಜನರು 'ಸುಸ್ತೋ, ಸುಸ್ತೋ' ಎಂದಿರುವುದು 'ಸುಸ್ತೋ ಸುಸ್ತು' ಸಾಕಿತ್ತಲ್ಲವೇ?'
'ಅದೇ ಪುಟದ 'ಇಂದು ಹಾಸ್ಟೆಲ್ ವಿದ್ಯಾರ್ಥಿ...' ಲೇಖನದಲ್ಲಿ ರಾಜ್ಯದಲ್ಲಿ 'ಸಮಾಜ ಕಲ್ಯಾಣ ಕಲ್ಯಾಣ ಇಲಾಖೆ' ಎಂದಿದೆ. ಸಮಾಜ ಕಲ್ಯಾಣ ಇಲಾಖೆಗೆ ಒಂದೇ ಕಲ್ಯಾಣ ಸಾಕಾಗುವುದಿಲ್ಲವೇ? ಪುಟ 15ರಲ್ಲಿ 'ಧ್ಯಾನ್ಚಂದ್ ಮೈದಾನಕ್ಕೆ ಕುಡುಕರ ಕಾವಲು!' ಲೇಖನದಲ್ಲಿ ಖಾಸಗಿ ಭದ್ರತಾ ಸಂಸ್ಥೆಯ ಕಾವಲುಗಾರರ 'ಮಲ್ವಿಚಾರಕ' ಎಂದಿದೆ.  'ಮೇಲ್ವಿಚಾರಕ' ಇರಬೇಕಿತ್ತಲ್ಲವೇ? ಎಂದಿದ್ದಾರೆ.
ವಿದ್ಯಮಾನವೇ ಸರಿಯಾದ ಬಳಕೆ. ವಿದ್ಯಾಮಾನ ಎಂದರೆ ವಿದ್ಯಾ ಎಂಬ ಹುಡುಗಿಯ ಮಾನವೇನೋ ಎಂದೂ ಅರ್ಥಬರುವ ಸಾಧ್ಯತೆ ಇದೆ. ವಿದ್ಯಮಾನ ಎಂದರೆ ಬೆಳವಣಿಗೆ, ಘಟನೆ ಎಂಬರ್ಥದಲ್ಲಿ ಬಳಸಲಾಗುತ್ತದೆ.
ಚೇತನ್ ಕಡೂರು ಅವರು ಬರೆಯುತ್ತಾರೆ- "ಬೈಟು ಕಾಫಿ'ಯಲ್ಲಿ ಯಾವಾಗಲೂ ಒಂದು ಅಂಶವನ್ನು ಗಮನಿಸಿದ್ದೇನೆ. ತುಂಬ ಸರಳವೆನಿಸಿದ ಶಬ್ದಗಳನ್ನು ತಪ್ಪಾಗಿ ಬರೆಯುತ್ತಾರೆ. ಮಾರ್ಚ್ 14ರಂದು 'ಬೈಟುಕಾಫಿ'ಯಲ್ಲಿ 'ಮಂಗಮಾಯ' ಲೇಖನದ ಬ್ಲರ್ಬ್ನಲ್ಲಿ ಒಂದು ತಪ್ಪಾಗಿದೆ. ಅದು 'ಧಾರಿಯಲ್ಲಿ' ಎಂದು ಬರೆದಿದ್ದಾರೆ. ಹಾಗೆ ಎರಡನೆ ಪುಟದ ವಿವೇಕ ವಿಚಾರದಲ್ಲಿ "ಬೋಧಿಸುವ ಪ್ರವಾದಿಗಳಾಗಬೇಕಾಂದು" ಎಂದು ಬರೆದಿದ್ದಾರೆ. ಅದು 'ಬೋಧಿಸುವ ಪ್ರವಾದಿಗಳಾಗಬೇಕೆಂದು ಬಯಸುತ್ತೇನೆ" ಎಂದಾಗಬೇಕಿತ್ತಲ್ಲವೇ?' ಎಂದಿದ್ದಾರೆ.

- ವಿಶ್ವೇಶ್ವರ ಭಟ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments