ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ಸರ್ಕಾರದ ಹೊಸ ಪೇಚು

Parashurama
Updated On : 28 Mar 2013, 9:49 am

ಪ್ರತಿಷ್ಠಿತ ಸರ್ಕಾರಿ ಕಂಪನಿಗಳ ಷೇರುಗಳನ್ನು ಪೇಟೆಯಲ್ಲಿ ಮಾರಿ, ಬರುವ ಹಣದ ಮೂಲಕ ಬಜೆಟ್ ಕೊರತೆಯಲ್ಲಿನ ಒಂದಂಶವನ್ನು ತುಂಬುವ ಯೋಜನೆ ಕಳೆದ ಹಲವಾರು ವರ್ಷಗಳಿಂದಲೂ ಜಾರಿಯಲ್ಲಿದೆ. ಆದರೆ ತಾತ್ವಿಕವಾಗಿ ಆ ನೀತಿಯನ್ನು ಒಪ್ಪಿದ ಅನಂತರ ಅದರ ಜಾರಿಯ ಸಮಯದಲ್ಲಿ ಸೈದ್ಧಾಂತಿಕ ವಿಚಾರಗಳಲ್ಲಿನ ಜಿಜ್ಞಾಸೆಯ ಪರಿಣಾಮವಾಗಿ ಕಾರ್ಯಾಚರಣೆಯಲ್ಲಿ ವಿಳಂಬ ಅನಿವಾರ್ಯವಾಗಿದೆ.
ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ ವಿಚಾರ ಎಂದರೆ ಬಂಡವಾಳ ಪೇಟೆಯ ಸ್ಥಿತಿ ಗತಿ ಸರ್ಕಾರದ ಕ್ರಮಗಳನ್ನೇ ಅವಲಂಬಿಸುವುದಿಲ್ಲ ಎನ್ನುವುದು. ಈ ಮೂಲದಿಂದ ಸಂಪತ್ತಿನ ಸಂಗ್ರಹಕ್ಕೆ ಗುರಿಯನ್ನು ನಿಗದಿ ಪಡಿಸುವುದು ಡಿಸೆಂಬರ್ನಲ್ಲಿ. ಬಜೆಟ್ ಮಂಡನೆಗೆ ಮುನ್ನ ಬಜೆಟ್ ಅಂಗೀಕಾರವಾದ ಅನಂತರವೇ ನಿರ್ದಿಷ್ಟವಾದ ಸಂಸ್ಥೆಗಳನ್ನು ಗುರ್ತಿಸಿ, ಯಾವ ಸಂಸ್ಥೆಯಲ್ಲಿ ಎಷ್ಟು ಷೇರುಗಳನ್ನು ಮಾರಬೇಕೆನ್ನುವ ನಿರ್ಧಾರ ಪ್ರಕಟವಾಗುವುದು. ಅಲ್ಲಿಗೇ ಮುಗಿಯುವುದಿಲ್ಲ.
ಮತ್ತೆ ಸೈದ್ಧಾಂತಿಕ ತಿಸ್ರಗಳು ಹುಟ್ಟಿಕೊಳ್ಳುತ್ತವೆ. ಇವೆಲ್ಲದರ ಪರಿಣಾಮವಾಗಿ ನೀತಿಯನ್ನು ಜಾರಿಗೆ ತರುವುದು ವಿಳಂಬವಾಗುತ್ತಿದೆ. ನಿರ್ಧಾರವಾಗುವುದು ಡಿಸೆಂಬರ್ನಲ್ಲಿ. ನೀತಿ ಜಾರಿಗೆ ಬರುವುದು ಹೆಚ್ಚು ಕಡಿಮೆ ಒಂದು ವರ್ಷದ ಅನಂತರ. ಅಲ್ಲಿಯವರೆಗೆ ಷೇರು ಬಜಾರು ಸ್ಥಗಿತವಾಗಿರುವುದಿಲ್ಲ.
ಉದಾಹರಣೆಗೆ ಕಳೆದ ವರ್ಷ ಸರ್ಕಾರಿ ಕಂಪನಿಗಳ ಷೇರುಗಳ ಬೆಲೆ ಕುಸಿದಿತ್ತು. ಆಗ ಷೇರು ಕೊಂಡವರಿಗೂ ನಷ್ಟ. ಉಳಿದ ಸರ್ಕಾರಿ ಷೇರುಗಳೂ ಬೆಲೆ ಕಳೆದುಕೊಂಡವು.  ಈ ವರ್ಷ ಸರ್ಕಾರಿ ಕಂಪನಿಗಳ ಷೇರು ಮಾರಾಟದ ಗುರಿ ಸಾಧನೆಯಾಗಿರುವುದು ಸರ್ಕಾರಿ ವಿತ್ತೀಯ ಕಂಪನಿಗಳ ವ್ಯವಹಾರದಿಂದ.
ಎಲ್ಲೈಸಿ ದೊಡ್ಡ ಕಾಣಿಕೆ ನೀಡಿದೆ ನಿಜ. ಆದರೆ ಸರ್ಕಾರದ ಹಣ ಒಂದು ಸಂಸ್ಥೆಯಿಂದ ಇನ್ನೊಂದು ಸಂಸ್ಥೆಗೆ ಸರ್ಕಾರದ್ದೇ ಬಂದರೆ ಆಗುವ ಲಾಭವೇನು ಷೇರುದಾರರು ನಷ್ಟ ಅನುಭವಿಸುತ್ತಾರೆ. ಈ ನೀತಿಯಲ್ಲಿ ವಿಳಂಬ ಸಲ್ಲದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments