ಸಂಪಾದಕೀಯ

ಹಿಂದೆ ಜನ ಹೀಗಿದ್ದರು!

1917ರ ಒಂದು ಭಾನುವಾರ. ದಿವಾನ್ ಸರ್.ಎಂ.ವಿಶ್ವೇಶ್ವರಯ್ಯನವರ ಭೇಟಿಗಾಗಿ ಒಬ್ಬ ವ್ಯೆದಿಕ ಬ್ರಾಹ್ಮಣರು ಬಂದಿದ್ದರು. ಅವರನ್ನು ನೋಡಿದರೆ ಸರ್ಕಾರದಿಂದ ಏನಾದರೂ ಸಹಾಯ ಬೇಡಲೆಂದೇ ಬಂದಿರಬಹುದೆಂದು ಭಾವಿಸಿ ಭೇಟಿಯನ್ನು ನಿರಾಕರಿಸಲಾಯ್ತು. ಆದರೆ ಅವರು ಬಿಟ್ಟರೆ ತಾನೆ. ತಮ್ಮ ಸಂಪಾದನೆಯ ಒಂದು ದೊಡ್ಡ ಮೊತ್ತವನ್ನು ಸರ್ಕಾರದ ಸಮಾಜಮುಖಿ ಕೆಲಸಗಳಿಗೆ ದೇಣಿಗೆ ನೀಡಲು ಬಂದಿರುವುದಾಗಿ ಅಲವತ್ತುಕೊಂಡರು. ಅದು ಅಂದಿನ ಕಾಲಕ್ಕೆ ಬಹುದೊಡ್ಡ ಮೊತ್ತವಾಗಿತ್ತು. ಕೊನೆಗೆ ದಿವಾನರ ಕಾರ್ಯದರ್ಶಿಗಳು ದಿವಾನರನ್ನು ಕಂಡು ಭೇಟಿಗೆ ಅವಕಾಶ ಕಲ್ಪಿಸಿಕೊಟ್ಟರು. ಅವರ ವಿದ್ವತ್ತು, ಸಂಸ್ಕೃತದ ಬಗ್ಗೆ ಇರುವ ಪಾಂಡಿತ್ಯ ಇವನ್ನೆಲ್ಲಾ ತಿಳಿದು ಅವರೊಬ್ಬ ಅಸಾಮಾನ್ಯ ವ್ಯಕ್ತಿಯೆಂದು ಗೊತ್ತಾಯಿತು. ಕೂಲಂಕಶ ವಿಚಾರಿಸಿದಾಗ ಅವರು ಅರಮನೆಯಲ್ಲಿ ಧರ್ಮಾಧಿಕಾರಿಯೆಂದೂ, ಅವರ ಹೆಸರು ನವೀನಂ ರಾಮಾನುಜಾಚಾರ್ಯರೆಂದೂ, ಜೀವನದಲ್ಲಿ ಅನೇಕ ದಿಗ್ಗಜರಿಗೆ ಸಂಸ್ಕೃತ ಪಾಠಮಾಡಿ ನ್ಯಾಯದಿಂದ ಹಣ ಸಂಪಾದನೆ ಮಾಡಿದ್ದಾರೆಂದೂ ತಿಳಿಯಿತು. ಅವರೊಡನೆ ಸುಮಾರು ಒಂದು ಗಂಟೆ ಕಾಲ ಮಾತನಾಡಿದ ವಿಶ್ವೇಶ್ವರಯ್ಯನವರು ಅವರ ಪಾಂಡಿತ್ಯಕ್ಕೆ ತಲೆದೂಗಿದರು. ಅವರು ಅಭಿಮಾನದಿಂದ ನೀಡಿದ ಮೂವತ್ತಮೂರು ಸಾವಿರ ರುಪಾಯಿಗಳನ್ನು ಸ್ವೀಕರಿಸಿದರು. ಅದನ್ನು ಪಂಡಿತರ ಹೆಸರಿನಲ್ಲಿ ಮೈಸೂರು ವಿಶ್ವ ವಿದ್ಯಾನಿಲಯದಲ್ಲಿ ಪ್ರತಿಭಾವಂತ, ಬಡ ವಿದ್ಯಾರ್ಥಿ ವೇತನಕ್ಕಾಗಿ ಉಪಯೋಗಿಸಲು ಆದೇಶಿಸಿದರು.
ಅದೇ ರೀತಿ ಇನ್ನೊಂದು ಘಟನೆ. ಇಂದೂರಿನ ರೆಸಿಡೆಂಟರಾಗಿದ್ದ ಸರ್.ಹ್ಯೂ ಡಾಲಿಯವರು ನಿವೃತ್ತರಾದ ಮೇಲೆ ಇಂಗ್ಲೆಂಡಿಗೆ ಮರಳಲು ನಿರ್ಧರಿಸಿದರು. ಆದರೆ ಅದೇ ಸಮಯಕ್ಕೆ ಮೊದಲ ವಿಶ್ವ ಸಮರ ಪ್ರಾರಂಭವಾದ್ದರಿಂದ ಹಡಗು ದೊರೆಯದೆ ಅವರು ಆರು ತಿಂಗಳುಗಳ ಕಾಲ ಭಾರತದಲ್ಲಿಯೇ ಉಳಿಯಬೇಕಾದ ಅನಿವಾರ್ಯ ಪರಿಸ್ಥಿತಿ ಉದ್ಭವಿಸಿತು. ಉದಕಮಂಡಲದಲ್ಲಿದ್ದ ಮೈಸೂರು ಮಹಾರಾಜರ ಬಂಗಲೆಯನ್ನು ಅವರ ವಾಸಕ್ಕಾಗಿ ಉಚಿತವಾಗಿ ನೀಡಲಾಗಿತ್ತು.  ಏಕೆಂದರೆ ಅವರು ಹಿಂದೆ ಮೈಸೂರಿನ ಅನೇಕ ಯೋಜನೆಗಳಿಗೆ ತಮ್ಮ ನೆರವನ್ನು ನೀಡಿದ್ದರು. ಆದರೆ ಸ್ವಾಭಿಮಾನಿಯಾಗಿದ್ದ ಡಾಲಿಯವರು ಅಲ್ಲಿ ಆರು ತಿಂಗಳುಗಳ ಕಾಲವಿದ್ದು ಹೋಗುವಾಗ ತಿಂಗಳಿಗೆ ಮುನ್ನೂರು ರುಪಾಯಿಗಳಂತೆ ಲೆಕ್ಕಹಾಕಿ 1800 ರುಪಾಯಿಗಳನ್ನು ಮಹಾರಾಜರಿಗೆ ಒಪ್ಪಿಸಿದರು. ಎಷ್ಟೇ ಬೇಡವೆಂದರೂ ಕೇಳಲಿಲ್ಲ. ಕೊನೆಗೆ ಆ ಹಣವನ್ನೂ ಸಹ ಮೈಸೂರು ವಿಶ್ವವಿದ್ಯಾನಿಲಯಕ್ಕೆ ನೀಡಿ ಅದನ್ನು ಹಿಂದುಳಿದ ವರ್ಗಗಳ ವಿದ್ಯಾರ್ಥಿವೇತನಕ್ಕಾಗಿ ಉಪಯೋಗಿಸಬೇಕೆಂದು ತಿಳಿಸಲಾಯಿತು. ಇದರಿಂದ ಹಿಂದೆ ಎಂತಹ ಮಹಾಪುರಷರಿದ್ದರು ಎಂದು ತಿಳಿದುಬರುತ್ತದೆ.
- ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
rajsundar1957@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತ, ಆಫ್ರಿಕಾಗೆ ಸೂಕ್ತ ಪ್ರಾತಿನಿಧ್ಯ ಸಿಗಲೇಬೇಕು: ಜೈಶಂಕರ್ ಆಗ್ರಹ

ಪ್ರತಿಭಟನೆಗಳ ನಡುವೆಯೇ ಚು. ಆಯೋಗ ಮಹತ್ವದ ನಡೆ, ಹೊಸ ಉಪಾಯುಕ್ತರ ನೇಮಕ, 27 ಅಧಿಕಾರಿಗಳಿಗೆ ಹೊಸ ಹೊಣೆ!

ಮಣಿಪುರದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ: 30 ಮನೆ-ಅಂಗಡಿಗಳಿಗೆ ಬೆಂಕಿ, ಕನಿಷ್ಠ 5 ಸಾವು!

ಸರ್ಕಾರ ಕೇವಲ ಪ್ರೇಕ್ಷಕನಾಗಿ ಉಳಿಯಲು ಸಾಧ್ಯವಿಲ್ಲ: ದೆಹಲಿ ದಮನಕಾರಿ ಕ್ರಮ ಬೆಂಬಲಿಸಿದ ಸಚಿವ ಪ್ರಹ್ಲಾದ್ ಜೋಶಿ

'24 ಗಂಟೆಯೊಳಗೆ ಬಂಧಿತರ ಬಿಡುಗಡೆ ಮಾಡದಿದ್ದರೆ ನಾನೂ ಪ್ರತಿಭಟನೆ ಮಾಡುತ್ತೇನೆ': ಸೋನಮ್ ವಾಂಗ್‌ಚುಕ್ ಎಚ್ಚರಿಕೆ