ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ಉತ್ಸಾಹ ಮುಗೀತು: ಬೇಕು ಗಾಂಭೀರ್ಯ

ಟ್ವೆಂಟಿ-ಟ್ವೆಂಟಿ ಓವರ್‌ಗಳ ಮಾದರಿಯ ಇಂಡಿಯನ್ ಪ್ರೀಮಿಯರ್ ಲೀಗ್‌ನ ಪಂದ್ಯಗಳ ಅಬ್ಬರದ ಆರ್ಭಟ ಮುಗಿಲು ಮುಟ್ಟಿದ ಉತ್ಸಾಹದ ಕಾಲ ಮುಗಿದಿದೆ...

Rashmi Kasaragodu
Updated On : 27 May 2013, 10:56 am

ಟ್ವೆಂಟಿ-ಟ್ವೆಂಟಿ ಓವರ್‌ಗಳ ಮಾದರಿಯ ಇಂಡಿಯನ್ ಪ್ರೀಮಿಯರ್ ಲೀಗ್‌ನ ಪಂದ್ಯಗಳ ಅಬ್ಬರದ ಆರ್ಭಟ ಮುಗಿಲು ಮುಟ್ಟಿದ ಉತ್ಸಾಹದ ಕಾಲ ಮುಗಿದಿದೆ. ಆರನೆಯ ಆವೃತ್ತಿಯ ಐಪಿಎಲ್ ಪ್ರಶಸ್ತಿ ಮುಂಬೈ ಇಂಡಿಯನ್ಸ್ ಪಾಲಾಗಿದೆ. ಅಲ್ಲಿಗೆ ಇನ್ನೊಂದು ಅವತಾರ ಮುಗಿದಂತೆಯೇ ಆಯಿತು.
   ಆದರೆ ವಿಪರೀತ ಸಂಭ್ರಮ, ಮೈನವಿರೇಳಿಸುವಂತೆ ಮಾಡುವ ಪ್ರಕರಣಗಳ ಚರ್ಚೆಯ ಜಾಗದಲ್ಲಿ ಈಗ ನಡೆದಿರುವುದು ಸ್ಪಾಟ್ ಫಿಕ್ಸಿಂಗ್, ಭ್ರಷ್ಟಾಚಾರದ ವಿಚಾರದ ಚರ್ಚೆ.
   ಆ ಚರ್ಚೆಯ ಕೇಂದ್ರಬಿಂದು ಸ್ಪಾಟ್ ಫಿಕ್ಸಿಂಗ್ ಪ್ರಕರಣಗಳಲ್ಲಿ ಪೊಲೀಸ್ ಠಾಣೆ, ಜೈಲಿಗೆ ಹೋಗಿರುವ ವ್ಯಕ್ತಿಗಳಲ್ಲ. ಆ ಸುಖವನ್ನು ಕಂಡಿರುವ, ಆದರೆ ಯಾರ ಮೇಲೆ ಐಪಿಎಲ್-13ರ ಪಂದ್ಯಗಳನ್ನು ನ್ಯಾಯಬದ್ಧವಾಗಿ ನಡೆಸುವ ಜವಾಬ್ದಾರಿ ಇತ್ತೋ ಅಂತಹವರು. ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ ಅಧ್ಯಕ್ಷ, ಶ್ರೀಮಂತ ಉದ್ಯಮಿ ಎನ್.ಶ್ರೀನಿವಾಸನ್ ಅವರ ವರ್ತನೆಯೇ ಈ ವಾದ-ವಿವಾದಗಳಿಗೆ ಕೇಂದ್ರ. ಅವರ ಅಳಿಯನ ಮೇಲೇ ಆರೋಪ, ಸಂಶಯಗಳೆಲ್ಲವೂ ಇದೆ.
   ಈಗ ಶ್ರೀನಿವಾಸನ್ ಮಾಡಬೇಕಾಗಿರುವ ಕನಿಷ್ಠ ಕೆಲಸ ಎಂದರೆ ತಮ್ಮ ಸ್ಥಾನಕ್ಕೆ ರಾಜಿನಾಮೆ ಕೊಡುವುದು. ಅದು ಸಾಧ್ಯವಿಲ್ಲ ಎನ್ನುತ್ತಿದ್ದಾರೆ ಶ್ರೀನಿವಾಸನ್. ಈ ವಿಚಾರ ಸುಪ್ರೀಂ ಕೋರ್ಟಿನ ಮೆಟ್ಟಿಲನ್ನು ಹತ್ತಿದೆ. ರಾಜ್ಯ ಸಭೆಯಲ್ಲಿ ಪ್ರತಿಪಕ್ಷದ ನಾಯಕರಾಗಿರುವ ಅರುಣ್ ಜೈಟ್ಲಿ ಅವರು ಕ್ರಿಕೆಟ್ ಮಂಡಳಿಯ ಶಿಸ್ತು ಸಮಿತಿಯ ಅಧ್ಯಕ್ಷರೂ ಹೌದು.    ಆದಷ್ಟು ಬೇಗ ಈ ಸಮಸ್ಯೆಗೆ ಪರಿಹಾರವನ್ನು ಕಂಡುಹಿಡಿದು, ಕ್ರಿಕೆಟ್ ಪ್ರಪಂಚದಲ್ಲಿ ಭಾರತದ ಮರ್ಯಾದೆಯನ್ನು ಕಾಪಾಡುವುದು ಈಗ ಅವರ ಕರ್ತವ್ಯ. ಅದನ್ನು ನಿಭಾಯಿಸುವ ಶಕ್ತಿ ಅವರಿಗೆ ಇದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement